
ಮಂಡ್ಯ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ!
ಮಂಡ್ಯದಲ್ಲಿ 10 ವರ್ಷದ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ ಎಂಬ ಸತ್ಯ ಬಯಲಾಗಿದೆ.
ಕಾಂತರಾಜು ನಡೆಸುತ್ತಿದ್ದ ಟ್ಯೂಷನ್ ಸೆಂಟರ್ ಅಧಿಕೃತ ಅಲ್ಲ. ಹಾಗೂ ಕಾಂತರಾಜು ಓದಿರುವುದು ಕೇವಲ ಪಿಯುಸಿ ಮಾತ್ರ ಎಂದು ತಿಳಿದುಬಂದಿದೆ. ಡಿಡಿಪಿಐ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಇನ್ನು ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆಯು ಅನಧಿಕೃತ ಟ್ಯೂಷನ್ ಸೆಂಟರ್'ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು,ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಕೇಸ್ ಬೀಳಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ: ಅಪ್ರಾಪ್ತೆ ಮತ್ತು ಬಾಯ್‌ಫ್ರೆಂಡ್ ಕೊಲೆ ಮಾಡಿದ ಕುಟುಂಬ