ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ಇಬ್ಬರು ವಿಕೆಟ್ ಕೀಪರ್ ಯಾರು..?

ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿರುವ ಧೋನಿ ಸೀಮಿತ ಓವರ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಧೋನಿ ಅನುಪಸ್ಥಿತಿಯಲ್ಲಿ ಪಂತ್’ಗೆ ಸಾಕಷ್ಟು ಅವಕಾಶ ನೀಡಿದರು, ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮಹತ್ವದ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ಇಬ್ಬರು ಕ್ರಿಕೆಟಿಗರು ಯಾರು ಎನ್ನುವ ಕುತೂಹಲ ಜೋರಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು[ನ.12]: ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 10 ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹಲವು ಕ್ರಿಕೆಟಿಗರು ಹರಸಾಹಸ ಪಡುತ್ತಿದ್ದಾರೆ. ಆದರೆ ಟೀಂ ಇಂಡಿಯಾಗೆ ಇನ್ನು ಒಂದು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ನಿರ್ಣಾಯಕ ಟಿ20: ತಂಡದ ಆಯ್ಕೆ ವಿರುದ್ದ ಫ್ಯಾನ್ಸ್ ಗರಂ!

ಹೌದು, ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್’ನಿಂದ ದೂರವೇ ಉಳಿದಿರುವ ಧೋನಿ ಸೀಮಿತ ಓವರ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಧೋನಿ ಅನುಪಸ್ಥಿತಿಯಲ್ಲಿ ಪಂತ್’ಗೆ ಸಾಕಷ್ಟು ಅವಕಾಶ ನೀಡಿದರು, ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮಹತ್ವದ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುವ ಇಬ್ಬರು ಕ್ರಿಕೆಟಿಗರು ಯಾರು ಎನ್ನುವ ಕುತೂಹಲ ಜೋರಾಗಿದೆ.

ಕೊನೆಗೂ ಬಗೆಹರಿಯಿತು ಟೀಂ ಇಂಡಿಯಾ ಬಹುಕಾಲದ ಸಮಸ್ಯೆ..!

ಸಂಜು ಸ್ಯಾಮ್ಸನ್ ಬಾಂಗ್ಲಾದೇಶ ವಿರುದ್ಧ ಸರಣಿಯಲ್ಲಿ ಬೆಂಚ್ ಕಾಯಿಸಿದ್ದೇ ಬಂತು, ಒಂದು ಅವಕಾಶವನ್ನು ನೀಡಲಿಲ್ಲ. ಹೀಗಾಗಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ ಬಳಿಕ, ಮತ್ತೊಂದು ಚುಟುಕು ವಿಶ್ವಕಪ್ ಗೆಲುವಿನ ಕನವರಿಕೆಯಲ್ಲಿರುವ ಭಾರತ ತಂಡಕ್ಕೆ ಉತ್ತಮ ಕೀಪರ್ ಅವಶ್ಯಕತೆಯಿದೆ. ಹೀಗಾಗಿ ತಂಡದಲ್ಲಿ ಯಾವ ಇಬ್ಬರು ವಿಕೆಟ್ ಕೀಪರ್ ಸ್ಥಾನ ಪಡೆಯುತ್ತಾರೆ ಎನ್ನುವುದನ್ನು ಕಾದು ನೋಡ ಬೇಕಿದೆ.

Related Video