Asianet Suvarna News Asianet Suvarna News
breaking news image

News Hour: ವಿಶ್ವ ವಿಜೇತರಿಗೆ ತವರಲ್ಲಿ ಅದ್ದೂರಿ ಸ್ವಾಗತ, ವಿಜಯಯಾತ್ರೆಗೆ ಸೇರಿದ ಜನಸಾಗರ!

ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ ತವರಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ವಾಣಿಜ್ಯ ನಗರಿ ಮುಂಬೈ ವಿಜಯಯಾತ್ರೆಗೆ ಸಾಕ್ಷಿಯಾಗಿದೆ. ಕ್ರಿಕೆಟ್​ ಅಭಿಮಾನಿಗಳ ಅಲೆ ಮಧ್ಯೆ ರೋಡ್​ ಷೋ ನಡೆದಿದೆ.

ಮುಂಬೈ (ಜು.4): ಭಾರತಕ್ಕೆ ಟಿ20 ವಿಶ್ವಕಪ್​​​​ ಚಾಂಪಿಯನ್ನರ ಆಗಮನವಾಗಿದೆ.. 3 ದಿನ ತಡವಾಗಿ ಬಂದ ರೋಹಿತ್​ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಾರ್ಬಡೋಸ್​​​ನಂತೆ ಭಾರತದಲ್ಲಿಯೂ ಸಂಭ್ರಮ ಮನೆ ಮಾಡಿತ್ತು.ವಿಶ್ವ ವಿಜೇತರರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ ಉಪಹಾರ ಕೂಟ ಆಯೋಜಿಸಿದ್ದರು.

17 ವರ್ಷಗಳ ಬಳಿಕ ಟೀಮ್​ ಇಂಡಿಯಾ ವಿಶ್ವಕಪ್​ ಕಾಳಗದ​ ಅಗ್ನಿ ಪರೀಕ್ಷೆ ಗೆದ್ದಾಗಿದೆ.. ಮಹಾ ಕದನದಲ್ಲಿ ಆಟಗಾರರು ನೀಡಿದ ಪ್ರದರ್ಶನದಿಂದಾಗಿ ವಿಶ್ವದೆದುರು  ಹೀರೋಗಳಾಗಿದ್ದಾರೆ.. ಟಿ20 ವಿಶ್ವಕಪ್​ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ. ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್​ ಬಳಗವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಟೀಮ್‌ ಇಂಡಿಯಾ ಪ್ಲೇಯರ್ಸ್‌ಗೆ 125 ಕೋಟಿ ರೂಪಾಯಿ ಚೆಕ್‌ ನೀಡಿದ ಬಿಸಿಸಿಐ

ಬೆರಿಲ್​ ಚಂಡಮಾರುತ ಪರಿಣಾಮ ಕಳೆದ 3 ದಿನಗಳಿಂದ ಟೀಂ ಇಂಡಿಯಾ ವೆಸ್ಟ್​ಇಂಡೀಸ್​​ನ ಬಾರ್ಬಡೊಸ್​ನಲ್ಲಿ ಉಳಿದುಕೊಂಡಿತ್ತು. ಹೀಗಾಗಿ ಬಿಸಿಸಿಐ ವಿಶೇಷ ಮುತುವರ್ಜಿ ವಹಿಸಿ ಚಾರ್ಟರ್ಡ್​ ಫ್ಲೈಟ್​ ಮೂಲಕ ಆಟಗಾರರನ್ನ ದೇಶಕ್ಕೆ ಕರೆತಂದಿದೆ.. ಇಂದು ಬೆಳಗ್ಗೆ 6:30ರ ಸುಮಾರಿಗೆ ರೋಹಿತ್​ & ಟೀಮ್​​ ದೆಹಲಿಗೆ ಬಂದಿಳಿದಿದ್ದು ವಿಮಾನ ನಿಲ್ದಾಣದಲ್ಲಿಯೇ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯ್ತು..
 

Video Top Stories