ಹೀಗ್ಯಾಕಾದ ಹಾರ್ದಿಕ್ ಪಾಂಡ್ಯ..? ಮುರಿದು ಬಿತ್ತಾ ಟೀಮ್ ಇಂಡಿಯಾ ಕ್ರಿಕೆಟಿಗನ 4 ವರ್ಷಗಳ ದಾಂಪತ್ಯ..?

ಡಿವೋರ್ಸ್ ಸುದ್ದಿ ಬೆನ್ನಲ್ಲೇ ಪರಪುರುಷನ ಜೊತೆ ಕಾಣಿಸಿಕೊಂಡ ಪಾಂಡ್ಯ ಪತ್ನಿ..!
ಒಂದು ವರ್ಷ ಡೇಟಿಂಗ್.. ಏಳು ತಿಂಗಳಲ್ಲಿ ಎಂಗೇಟ್ಮೆಂಟ್. ಮದುವೆ,ಮಗು..! 
ಪಾಂಡ್ಯಗೂ ಮೊದಲು ಮತ್ತೊಬ್ಬನನ್ನು ಪ್ರೀತಿಸಿದ್ದಳು ನತಾಶಾ ಸ್ಟಾಂಕೋವಿಕ್..!
 

First Published May 28, 2024, 2:31 PM IST | Last Updated May 28, 2024, 2:32 PM IST

ಹಾರ್ದಿಕ್ ಪಾಂಡ್ಯ(Hardik Pandya) ಅಂದ್ರೆ ನೆನಪಾಗೋದು 2022ರ ಟಿ20 ವಿಶ್ವಕಪ್‌ನಲ್ಲಿ ಆತ ಪಾಕಿಸ್ತಾನ ವಿರುದ್ಧ ಆಡಿದ್ದ ಇನ್ನಿಂಗ್ಸ್. ಅವತ್ತು ವಿರಾಟ್ ಕೊಹ್ಲಿ ಜೊತೆ ಪಾಂಡ್ಯ ನೆಲಕಚ್ಚಿ ನಿಲ್ಲದೇ ಹೋಗಿದ್ದಿದ್ರೆ, ಪಾಕಿಸ್ತಾನದ ಮುಂದೆ ಭಾರತ ಸೋಲ್ತಾ ಇತ್ತು. ಅದ್ಭುತ ಕ್ರಿಕೆಟಿಗ, ಅಸಾಮಾನ್ಯ ಪ್ರತಿಭಾವಂತ. ಆದ್ರೆ ಒಂದೇ ಒಂದು ಸಮಸ್ಯೆ. ಕಾಲು ನೆಲದ ಮೇಲೆ ನಿಲ್ಲಲ್ಲ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ್ರು ಅನ್ನೋ ಗಾದೆ ಇದ್ಯಲ್ಲಾ.. ಈ ಹಾರ್ದಿಕ್ ಪಾಂಡ್ಯ ಅಂಥಾ ಕೆಟಗರಿಗೆ ಸೇರಿದ ಮನುಷ್ಯ. ಇಂತಿಪ್ಪ ಹಾರ್ದಿಕ್ ಪಾಂಡ್ಯನ ವೈಯಕ್ತಿಕ ಜೀವನದಲ್ಲಿ ದೊಡ್ಡ ಬಿರುಗಾಳಿಯೇ ಎದ್ದು ಬಿಟ್ಟಿದೆ. ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಆಡೋದಕ್ಕೆ ಎರಡು ದಿನಗಳ ಹಿಂದೆಯೇ ಅಮೆರಿಕಕ್ಕೆ ಹೋಗಿದೆ. ಆದ್ರೆ ತಂಡದ ಜೊತೆ ಹೋಗಬೇಕಿದ್ದ ಉಪನಾಯಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕಾಣಿಸ್ತಾ ಇಲ್ಲ. ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ನಟಿ ಕಮ್ ಮಾಡೆಲ್ ನತಾಶಾ ಸ್ಟಾಂಕೋವಿಕ್(Natasa Stankovic) ದಾಂಪತ್ಯ ಮುರಿದು ಬೀಳೋದ್ರದಲ್ಲಿದೆ. ಪಾಂಡ್ಯ ಮತ್ತು ನತಾಶಾ ದೂರವಾಗಲಿದ್ದಾರೆ, ಡಿವೋರ್ಸ್(Divorce) ಕೊಡೋದೊಂದೇ ಬಾಕಿ ಅನ್ನೋ ಸುದ್ದಿಗಳು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಾ ಇವೆ. ಇದಕ್ಕೆ ಪುಷ್ಠಿ ನೀಡುವಂತೆ ಒಂದಷ್ಟು ಬೆಳವಣಿಗೆಗಳೂ ನಡೆದಿವೆ. 

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ..? ಯಾವ ಮೂಲದಿಂದ ವಿಡಿಯೋ ಕಳಿಸಲಾಗಿದೆ..?