Asianet Suvarna News Asianet Suvarna News

Ahmedabad Test: ಆಸೀಸ್‌ ಪ್ರಧಾನಿ ಜತೆ ಮೋದಿ ಪಂದ್ಯ ವೀಕ್ಷಣೆ, ಮುಗಿಲು ಮುಟ್ಟಿದ ಮೋದಿ ಜಯಘೋಷ..!

ಅಹಮದಾಬಾದ್ ಟೆಸ್ಟ್ ಪಂದ್ಯ ವೀಕ್ಷಿಸಿದ ಪ್ರಧಾನಿ ಮೋದಿ,  ಆಸೀಸ್‌ ಪ್ರಧಾನಿ ಆಂಥೋನಿ ಆಲ್ಬನೀಸ್‌
ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯಕ್ಕೆ ಅಹಮದಾಬಾದ್‌ ಆತಿಥ್ಯ
ಮೈದಾನ ಸುತ್ತಿದ ಮೋದಿಗೆ ಪ್ರೇಕ್ಷಕರಿಂದ ಜಯಘೋಷ

ಅಹಮದಾಬಾದ್‌(ಮಾ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಪಂದ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ ಜತೆಯಾಗಿಯೇ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. 

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಈ ಇಬ್ಬರು ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು. ಇದಾದ ಬಳಿಕ ಮೋದಿ ಹಾಗೂ ಆಸೀಸ್ ಪ್ರಧಾನಿ ಮೈದಾನದೊಳಗೆ ತೆರೆದ ವಾಹನದಲ್ಲಿ ಮೈದಾನವನ್ನು ಸುತ್ತಿದರು. ಈ ಸಂದರ್ಭದಲ್ಲಿ ಮೋದಿ ಜಯಘೋಷ ಮುಗಿಲು ಮುಟ್ಟಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories