ನಾನೆಂದು ಬಿಸಿಸಿಐ ಅಧ್ಯಕ್ಷನಾಗುತ್ತೇನೆಂದುಕೊಂಡಿರಲಿಲ್ಲ: ರೋಜರ್ ಬಿನ್ನಿ
ಬಿಸಿಸಿಐ ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ
ಬಿಸಿಸಿಐ ಅಧ್ಯಕ್ಷರಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ
ನಾನೆಂದು ಬಿಸಿಸಿಐ ಅಧ್ಯಕ್ಷ ಆಗುತ್ತೇನೆ ಅಂದುಕೊಂಡಿರಲಿಲ್ಲ
ನಾನು ಭಾರತದ ಎಲ್ಲಾ ಮೈದಾನಗಳಲ್ಲಿ ಆಡಿದ್ದೇನೆ
ನನಗೆ ಎಲ್ಲಾ ಕ್ರಿಕೆಟ್ ಮೂಲಸೌಕರ್ಯ ಗಳ ಅರಿವಿದೆ
ಬೆಂಗಳೂರು(ಅ.21): ಬಿಸಿಸಿಐ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಕರ್ನಾಟಕದ ರೋಜರ್ ಬಿನ್ನಿ, ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಮನಬಿಚ್ಚಿ ಮಾತನಾಡಿದರು. ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಜತೆಗಿನ ಒಡನಾಟವನ್ನು ಬಿನ್ನಿ ಮೆಲುಕು ಹಾಕಿದರು.
ಈ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಬಿಸಿಸಿಐ ಅಧ್ಯಕ್ಷನಾಗುತ್ತೇನೆ ಎಂದುಕೊಂಡಿರಲಿಲ್ಲ. ಇದೀಗ ಬಿಸಿಸಿಐ ಅಧ್ಯಕ್ಷರಾಗಿರುವುದಕ್ಕೆ ಖುಷಿಯಾಗುತ್ತಿದೆ. ನಾನು ನಮ್ಮ ದೇಶದ ಎಲ್ಲಾ ಮೈದಾನಗಳಲ್ಲೂ ಆಡಿದ್ದೇನೆ. ಹೀಗಾಗಿ ಕ್ರೀಡಾಂಗಣಗಳ ಮೂಲಸೌಕರ್ಯಗಳ ಅರಿವಿದೆ. ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದರ ಬಗ್ಗೆ ಹಾಗೂ ಸ್ಪರ್ಧಾತ್ಮಕ ಪಿಚ್ ರೂಪಿಸುವ ಬಗ್ಗೆ ಗಮನ ಹರಿಸುವುದಾಗಿ ರೋಜರ್ ಬಿನ್ನಿ ಹೇಳಿದ್ದಾರೆ