Asianet Suvarna News Asianet Suvarna News

ಇನ್ನೆರಡು ವಾರ ಮನೆಯಲ್ಲಿರೋಣ, ರಾಜ್ಯದ ಜನತೆಗೆ ಜಾವಗಲ್ ಶ್ರೀನಾಥ್ ಮನವಿ

ಈಗಾಗಲೇ ಹಲವು ಕ್ರೀಡಾ ತಾರೆಯರು, ಚಲನಚಿತ್ರ ನಟ-ನಟಿಯರು ಕೊರೋನಾ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ, ಜತೆಗೆ ಎಲ್ಲರೂ ಮನೆಯಲ್ಲೇ ಇರುವುದರ ಮೂಲಕ ಕೊರೋನಾದಿಂದ ಬಚಾವಾಗೋಣ ಎನ್ನುವ ಸಂದೇಶವನ್ನು ನೀಡಿದ್ದಾರೆ. ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಸಹ ಕೊರೋನಾ ಜಾಗೃತಿ ಮೂಡಿಸಿದ್ದರು. ಇದೀಗ ಮತ್ತೋರ್ವ ಕನ್ನಡಿಗ ಜಾವಗಲ್ ಶ್ರೀನಾಥ್ ಕರ್ನಾಟಕದ ಜನತೆಗೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು(ಏ.11): ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಮದ್ದಿಲ್ಲದ ಮಹಾಮಾರಿಯಾಗಿ ಪರಿಣಮಿಸಿರುವ ಕೊರೋನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಘೋಷಿಸಿದ್ದಾರೆ.

50 ಲಕ್ಷ ರೂ ದೇಣಿಗೆ ಬಳಿಕ 5 ಸಾವಿರ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ತೆಂಡುಲ್ಕರ್!

ಈಗಾಗಲೇ ಹಲವು ಕ್ರೀಡಾ ತಾರೆಯರು, ಚಲನಚಿತ್ರ ನಟ-ನಟಿಯರು ಕೊರೋನಾ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ, ಜತೆಗೆ ಎಲ್ಲರೂ ಮನೆಯಲ್ಲೇ ಇರುವುದರ ಮೂಲಕ ಕೊರೋನಾದಿಂದ ಬಚಾವಾಗೋಣ ಎನ್ನುವ ಸಂದೇಶವನ್ನು ನೀಡಿದ್ದಾರೆ. ಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಸಹ ಕೊರೋನಾ ಜಾಗೃತಿ ಮೂಡಿಸಿದ್ದರು.

ಇದೀಗ ಮೈಸೂರ್ ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್, ಎಲ್ಲರೂ ಮನೆಯಲ್ಲಿ ಇರಿ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಜತೆಗೆ ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರಿಗೆ, ಪೌರ ಕಾರ್ಮಿಕರಿಗೆ, ವೈದ್ಯ ಸಿಬ್ಬಂದಿಗಳಿಗೆ ಶ್ರೀನಾಥ್ ಧನ್ಯವಾದ ಅರ್ಪಿಸಿದ್ದಾರೆ. ಜಾವಗಲ್ ಶ್ರೀನಾಥ್ ಮಾತುಗಳನ್ನು ಕೇಳಿದ ಬಳಿಕವಾದರೂ ಬೇಕಾಬಿಟ್ಟಿ ಓಡಾಡದೇ ಮನೆಯಲ್ಲಿರಿ. 

Video Top Stories