Asianet Suvarna News Asianet Suvarna News

ಇಂಡೋ-ಪಾಕ್ ಚೊಚ್ಚಲ ಪಂದ್ಯ ನಡೆದದ್ದು, ಗೆದ್ದಿದ್ದು..?

ಸಾಂಪ್ರದಾಯಿಕ ಎದುರಾಳಿಗಳು ಎಂದು ಕರೆಸಿಕೊಳ್ಳುವ ಇಂಡೋ-ಪಾಕ್ ನಡುವಿನ ಮೊದಲ ಪಂದ್ಯ ಎಲ್ಲಿ ನಡೆದಿತ್ತು, ಯಾರು ಗೆದ್ದಿದ್ದರು, ಹೇಗಿತ್ತು ಆ ಸರಣಿ ಎನ್ನುವುದರ ಒಂದು ಮೆಲುಕು ಇಲ್ಲಿದೆ ನೋಡಿ... 

ಬೆಂಗಳೂರು[ಅ19]: ವಿಶ್ವ ಕ್ರಿಕೆಟ್’ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಹೋರಾಟವನ್ನು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾದಾಟವೆಂದೇ ಬಣ್ಣಿಸಲಾಗುತ್ತದೆ. 1947ರಲ್ಲಿ ಬ್ರಿಟೀಷರು ಭಾರತ-ಪಾಕಿಸ್ತಾನವನ್ನುಇಬ್ಬಾಗ ಮಾಡಿದಾಗಿನಿಂದಲೇ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತು. ಇಂಡೋ-ಪಾಕಿಸ್ತಾನ ಯುದ್ಧಗಳು, ಕಾಶ್ಮೀರ ಸಮಸ್ಯೆ ಸಾಂಪ್ರದಾಯಿಕ ಎದುರಾಳಿಗಳ ಕಾದಾಟಕ್ಕೆ ಇನ್ನಷ್ಟು ಕಿಚ್ಚು ಹಚ್ಚಿಸಿವೆ.

1952ರ ಈ ದಿನ ಪಾಕಿಸ್ತಾನ ವಿರುದ್ಧ ಭಾರತ ತಾನಾಡಿದ ಮೊದಲ ಪಂದ್ಯದಲ್ಲೇ ಪಾಕಿಸ್ತಾನವನ್ನು ಬಗ್ಗುಬಡಿದಿತ್ತು. 5 ಟೆಸ್ಟ್ ಪಂದ್ಯಗಳನ್ನಾಡಲು ಪಾಕಿಸ್ತಾನ ತಂಡವು 1952ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಭಾರತ-ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿತ್ತು. 

1952ರ ಈ ದಿನ ಪಾಕಿಸ್ತಾನ ವಿರುದ್ಧ ಭಾರತ ತಾನಾಡಿದ ಮೊದಲ ಪಂದ್ಯದಲ್ಲೇ ಪಾಕಿಸ್ತಾನವನ್ನು ಬಗ್ಗುಬಡಿದಿತ್ತು. 5 ಟೆಸ್ಟ್ ಪಂದ್ಯಗಳನ್ನಾಡಲು ಪಾಕಿಸ್ತಾನ ತಂಡವು 1952ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಭಾರತ-ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿತ್ತು. 

RCB ತಂಡಕ್ಕೆ ಸೂಪರ್ ಪವರ್ ಎಂಟ್ರಿ: ಈ ಸಲ ಕಪ್ ನಮ್ದೇ...

ಟಾಸ್ ಗೆದ್ದ ಭಾರತ ತಂಡದ ನಾಯಕ ಲಾಲಾ ಅಮರ್ ನಾಥ್ ಬ್ಯಾಟಿಂಗ್ ಆಯ್ದುಕೊಂಡರು. ಭಾರತ ತಂಡವು 139.4 ಓವರ್’ಗಳಲ್ಲಿ 372 ರನ್ ಬಾರಿಸಿತು. ಹೇಮು ಅಧಿಕಾರಿ 82 ರನ್ ಬಾರಿಸುವ ಮೂಲಕ ತಂಡದ ಪರ ಗರಿಷ್ಠ ವೈಯುಕ್ತಿಕ ಮೊತ್ತ ದಾಖಲಿಸಿದರೆ, ಅಮಿರ್ ಎಲಾಹಿ ವಿಕೆಟ್ ಪಡೆದರು.

ರಾಂಚಿ ಟೆಸ್ಟ್: ಸಿಕ್ಸರ್’ನಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ

ಇನ್ನು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ, ವಿನೂ ಮಂಕಡ್ ಚಾಣಾಕ್ಷ ಎಡಗೈ ಸ್ಪಿನ್ ದಾಳಿಗೆ ತತ್ತರಿಸಿ ಹೋಯಿತು. ಪರಿಣಾಮ ಪಾಕಿಸ್ತಾನ ಮೊದಲ ಇನಿಂಗ್ಸ್ 150 ಹಾಗೂ ಎರಡನೇ ಇನಿಂಗ್ಸ್’ನಲ್ಲಿ 152 ರನ್ ಬಾರಿಸಿತು. ಮಂಕಡ್ 13 ವಿಕೆಟ್ ಪಡೆದು ಪಾಕ್ ಪಾಲಿಗೆ ಸಿಂಹಸ್ವಪ್ನರಾದರು. ಈ ರೀತಿಯಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಇನಿಂಗ್ಸ್ ಹಾಗೂ 70 ರನ್’ಗಳ ಜಯ ಬಾರಿಸಿತು. 

ಪಾಕಿಸ್ತಾನ ತಂಡವು ಲಖನೌದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಆದರೆ ಬಾಂಬೆಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.

Video Top Stories