Asianet Suvarna News Asianet Suvarna News

ರಾಂಚಿ ಟೆಸ್ಟ್: ಸಿಕ್ಸರ್’ನಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಸಿಕ್ಸರ್ ಬಾರಿಸುವುದು ಹೊಸದೇನಲ್ಲ. ಆದರೆ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಬಳಿಕ ರೆಡ್ ಬಾಲ್ ಕ್ರಿಕೆಟ್’ನಲ್ಲೂ ಹಿಟ್ ಮ್ಯಾನ್ ಅಬ್ಬರಿಸಲು ಆರಂಭಿಸಿದ್ದಾರೆ. ಮೊದಲ ಪಂದ್ಯದಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ರೋಹಿತ್ ಮೂರನೇ ಟೆಸ್ಟ್ ವೇಳೆಗೆ ಸಿಕ್ಸರ್’ನಲ್ಲಿ ವಿಶ್ವದಾಖಲೆಯನ್ನೇ ಬರೆದಿದ್ದಾರೆ. ಅಷ್ಟಕ್ಕೂ ರೋಹಿತ್ ಖಾತೆ ಸೇರಿದ ಆ ವಿಶ್ವದಾಖಲೆ ಯಾವುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Ranchi Test Rohit Sharma Creates World Record in highest sixes in single series
Author
Ranchi, First Published Oct 19, 2019, 2:37 PM IST

ರಾಂಚಿ[ಅ.19]: ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು ಅತ್ಯದ್ಭುತ ಇನಿಂಗ್ಸ್ ಕಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ 6ನೇ ಟೆಸ್ಟ್ ಶತಕ ದಾಖಲಿಸಿದ್ದಾರೆ. 
ಡೇನ್ ಪೀಟ್ ಎಸೆತದಲ್ಲಿ ಆಕರ್ಷಕ ಸಿಕ್ಸರ್ ಬಾರಿಸುವ ಮೂಲಕ ಈ ಸರಣಿಯಲ್ಲಿ ಮೂರನೇ ಶತಕ ಪೂರೈಸಿದರು. ಸ್ಫೋಟಕ ಬ್ಯಾಟಿಂಗ್’ಗೆ ಹೆಸರಾದ ರೋಹಿತ್ ಆರಂಭಿಕನಾಗಿ ಬಡ್ತಿ ಪಡೆದ ಮೊದಲ ಸರಣಿಯಲ್ಲೇ ಸಿಕ್ಸರ್’ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

ರಾಂಚಿ ಟೆಸ್ಟ್: ರೋಹಿತ್ ಶರ್ಮಾ ಸಿಡಿಲಬ್ಬರದ ಶತಕ

ಹೌದು ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ[17*] ಬ್ಯಾಟ್ಸ್’ಮನ್ ಎನ್ನುವ ವಿಶ್ವದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಈ ಮೊದಲು ವೆಸ್ಟ್ ಇಂಡೀಸ್ ಎಡಗೈ ಬ್ಯಾಟ್ಸ್’ಮನ್ ಶಿಮ್ರಾನ್ ಹೆಟ್ಮೇಯರ್ 2018/19ರಲ್ಲಿ ಬಾಂಗ್ಲಾದೇಶ ವಿರುದ್ಧ 15 ಸಿಕ್ಸರ್ ಬಾರಿಸಿದ್ದರು. ಆದರೆ ಡೇನ್ ಪೀಟ್ ಎಸೆತದಲ್ಲಿ ಆಕರ್ಷಕ ಸಿಕ್ಸರ್ ಸಿಡಿಸುವ ಮೂಲಕ ಆ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು.
ವೈಜಾಗ್’ನಲ್ಲಿ ನಡೆದ ಟೆಸ್ಟ್’ನಲ್ಲಿ ರೋಹಿತ್ ಶರ್ಮಾ 13 ಸಿಕ್ಸರ್ ಸಿಡಿಸುವ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆದಿದ್ದರು. ಇದೀಗ ಅಂತಿಮ ಟೆಸ್ಟ್ ಪಂದ್ಯದ ವೇಳೆಗೆ ಸರಣಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್’ಮನ್ ಎನ್ನುವ ದಾಖಲೆಯೂ ರೋಹಿತ್ ಪಾಲಾಗಿದೆ.
70ರ ವಿಂಡೀಸ್‌, 90 ಆಸೀಸ್‌ನಷ್ಟೇ ಈಗ ಟೀಂ ಇಂಡಿಯಾ ಬಲಿಷ್ಠ

ಭಜ್ಜಿ ದಾಖಲೆ ಚೂರು: ರೋಹಿತ್ ಶರ್ಮಾ 15 ಸಿಕ್ಸರ್ ಬಾರಿಸುತ್ತಿದ್ದಂತೆ ಭಾರತ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ದಾಖಲೆಯೂ ರೋಹಿತ್ ಪಾಲಾಯಿತು. ಈ ಮೊದಲು ಹರ್ಭಜನ್ ಸಿಂಗ್ 2010-11ರಲ್ಲಿ ನ್ಯೂಜಿಲೆಂಡ್ ವಿರುದ್ಧ 14 ಸಿಕ್ಸರ್ ಬಾರಿಸಿದ್ದರು.

ರೋಹಿತ್ ಆರ್ಭಟಕ್ಕೆ 25 ವರ್ಷದ ದಾಖಲೆ ಧೂಳೀಪಟ..!

ಗಂಭೀರ್ ದಾಖಲೆ ಸಮ: ಸಿಕ್ಸರ್ ಮೂಲಕ ಅತಿ ಹೆಚ್ಚು ಟೆಸ್ಟ್ ಶತಕ ಪೂರೈಸಿದ ಜಂಟಿ ಎರಡನೇ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ. ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಎರಡು ಬಾರಿ ಸಿಕ್ಸರ್ ಮೂಲಕ ಶತಕ ಪೂರೈಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಸಚಿನ್ ಅಗ್ರಸ್ಥಾನದಲ್ಲಿದ್ದು, ಒಟ್ಟು 6 ಬಾರಿ ಸಿಕ್ಸರ್ ಮೂಲಕ ಶತಕ ಕಂಪ್ಲೀಟ್ ಮಾಡಿದ್ದಾರೆ.
 

Follow Us:
Download App:
  • android
  • ios