KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?

ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಫ್ರಾಂಚೈಸಿ ಮಾಲಿಕರು ಹಾಗೂ ಆಟಗಾರರು ನಡುವೆ ಸುತ್ತಿಕೊಂಡಿದ್ದ ಫಿಕ್ಸಿಂಗ್ ನಂಟು ಇದೀಗ ಹನಿ ಟ್ರಾಪಿಂಕ್ ಜಾಲದ ನಂಟು ಕೂಡ ಸ್ಪಷ್ಟವಾಗುತ್ತಿದೆ. ಹೆಣ್ಣಿನ ಆಸೆ ತೋರಿಸಿ ಟ್ರಾಪ್ ಮಾಡಿ ಆಟಗಾರರನ್ನು ಫಿಕ್ಸಿಂಗ್‌ಗೆ ಬಳಕೆ ಮಾಡಲಾಗುತ್ತಿತ್ತು ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ನ.20): ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಫ್ರಾಂಚೈಸಿ ಮಾಲಿಕರು ಹಾಗೂ ಆಟಗಾರರು ನಡುವೆ ಸುತ್ತಿಕೊಂಡಿದ್ದ ಫಿಕ್ಸಿಂಗ್ ನಂಟು ಇದೀಗ ಹನಿ ಟ್ರಾಪಿಂಕ್ ಜಾಲದ ನಂಟು ಕೂಡ ಸ್ಪಷ್ಟವಾಗುತ್ತಿದೆ. ಹೆಣ್ಣಿನ ಆಸೆ ತೋರಿಸಿ ಟ್ರಾಪ್ ಮಾಡಿ ಆಟಗಾರರನ್ನು ಫಿಕ್ಸಿಂಗ್‌ಗೆ ಬಳಕೆ ಮಾಡಲಾಗುತ್ತಿತ್ತು ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಕೆಪಿಎಲ್‌ ಫಿಕ್ಸಿಂಗ್‌: ರಾಜ್ಯ ಕ್ರಿಕೆಟ್‌ ಸಂಸ್ಥೆಗೇ ನೋಟಿಸ್‌!

ಆಟಗಾರರನ್ನು ವಿದೇಶಕ್ಕೆ ಕೆರೆದುಕೊಂಡು ಹೋಗುತ್ತಿದ್ದ ಫ್ರಾಂಚೈಸಿ ಮಾಲೀಕರು, ಫೈವ್ ಸ್ಟಾರ್ ಹೊಟೆಲ್‌ಗಳಲ್ಲಿ ಹನಿ ಟ್ರಾಪ್ ಮೂಲಕ ಆಟಗಾರರನ್ನು ಖೆಡ್ಡಾಗೆ ಬೀಳಿಸುತ್ತಿದ್ದರು. ಈ ವಿಡಿಯೋವನ್ನು ಚಿತ್ರೀಕರಿಸಿ ಬಳಿಕ ಆಟಗಾರರನ್ನು ಬೆದರಿಸಿ ಫಿಕ್ಸಿಂಗ್ ಮಾಡಲಾಗುತ್ತಿತ್ತು ಅನ್ನೋ ಮಾಹಿತಿ ರಾಜ್ಯ ಮಾತ್ರವಲ್ಲ ಭಾರತೀಯ ಕ್ರಿಕೆಟನ್ನೇ ತಲ್ಲಣಗೊಳಿಸಿದೆ.

Related Video