Asianet Suvarna News Asianet Suvarna News

ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಸೇರ್ಪಡೆ ಬಗ್ಗೆ ತುಟಿಬಿಚ್ಚಿದ ಸೌರವ್ ಗಂಗೂಲಿ

ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ತಿರುವನಂತಪುರಂ ಆತಿಥ್ಯ
ಕೇರಳದಲ್ಲಿ ನನಗೆ ಸಾಕಷ್ಟು ಒಳ್ಳೆಯ ನೆನಪುಗಳಿವೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಕೇರಳದಲ್ಲಿ ಒಳ್ಳೆಯ ಸ್ಟೇಡಿಯಂ ಇದೆ ಹಾಗೂ ಒಳ್ಳೆಯ ಪ್ರೇಕ್ಷಕರಿದ್ದಾರೆ
ಸಂಜು ಸ್ಯಾಮ್ಸನ್ ಒಳ್ಳೆಯ ಆಟಗಾರನಾಗಿದ್ದು, ಆಫ್ರಿಕಾ ಎದುರಿನ ಏಕದಿನ ತಂಡದಲ್ಲಿದ್ದಾರೆ
ಟೀಂ ಇಂಡಿಯಾದ ಭವಿಷ್ಯದ ಪ್ಲಾನ್‌ನಲ್ಲಿ ಸಂಜು ಸ್ಯಾಮ್ಸನ್ ಇದ್ದಾರೆ.

ತಿರುವನಂತಪುರಂ(ಸೆ.28): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೇರಳ ಸ್ಟೇಡಿಯಂ ಹಾಗೂ ಪ್ರೇಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಸೇರ್ಪಡೆ ಬಗ್ಗೆಯೂ ತುಟಿಬಿಚ್ಚಿದ್ದಾರೆ. 

ಸಂಜು ಸ್ಯಾಮ್ಸನ್ ಅವರೊಬ್ಬ ಒಳ್ಳೆಯ ಆಟಗಾರ. ಅವರು ಭಾರತದ ಭವಿಷ್ಯತ್ತಿನ ಯೋಜನೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್, ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿ ನಾಯಕರಾಗಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ದಾದಾ ಹೇಳಿದ್ದಾರೆ.
 

Video Top Stories