
ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
35 ದಿನಗಳ ಬ್ರೇಕ್ ಬಳಿಕ ಸೂರ್ಯಕುಮಾರ್ ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಕಣಕ್ಕಿಳಿಯುತ್ತಿದೆ. ಟಿ20 ವಿಶ್ವಕಪ್‌ಗೆ ರಿಹರ್ಸಲ್ ಆಗಿ ಈ ಟೂರ್ನಿಯನ್ನು ಬಳಸಿಕೊಳ್ಳಲು ತಂಡ ಎದುರು ನೋಡುತ್ತಿದೆ. ವಿಕೆಟ್ ಕೀಪರ್ ಮತ್ತು ಆರಂಭಿಕ ಆಟಗಾರರ ಆಯ್ಕೆ ಕುತೂಹಲ ಮೂಡಿಸಿದೆ.
ಏಷ್ಯಾಕಪ್‌ಯಲ್ಲಿಂದು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುಎಇ ವಿರುದ್ದ ಕಣಕ್ಕಿಳಿಯೋ ಮೂಲಕ ತನ್ನ ಕ್ಯಾಂಪೇನ್ ಸ್ಟಾರ್ಟ್ ಮಾಡ್ತಿದೆ. 35 ದಿನಗಳ ಬ್ರೇಕ್ ಬಳಿಕ ಟೀಂ ಇಂಡಿಯಾ ಮೊದಲ ಸಲ ಮೈದಾನಕ್ಕಿಳಿತಾ ಇದೆ. ಹಾಲಿ ಚಾಂಪಿಯನ್ ಭಾರತಕ್ಕೆ ಯುಎಇ ಸುಲಭ ತುತ್ತಾಗುವ ನಿರೀಕ್ಷೆಯಿದೆ. ಈ ಮ್ಯಾಚ್‌ಗೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸ್ತಾ ಇದೆ.
ಮುಂಬರುವ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ, ಈ ಏಷ್ಯಾಕಪ್ ಟೂರ್ನಿಯನ್ನು ರಿಹರ್ಸಲ್‌ಗೆ ಬಳಸಿಕೊಳ್ಳಲು ಎದುರು ನೋಡ್ತಿದೆ. ಮೇಲ್ನೋಟಕ್ಕೆ ಸೂರ್ಯ ಪಡೆ ಈ ಬಾರಿಯ ಏಷ್ಯಾಕಪ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಆದರೂ ಈ ಸಲ ಶುಭ್‌ಮನ್ ಗಿಲ್ ವೈಸ್ ಕ್ಯಾಪ್ಟನ್ ಆಗಿರೋದ್ರಿಂದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು ಎನ್ನುವ ಕುತೂಹಲ ಇನ್ನೂ ಇದೆ.
ಯಾಕಂದ್ರೆ 18ನೇ ಸೀಸನ್ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಆರ್‌ಸಿಬಿ ಪರ ಡೆತ್ ಓವರ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿ ಆಯ್ಕೆಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಶುಭ್‌ಮನ್ ಗಿಲ್ ಕೂಡಾ ತಂಡ ಕೂಡಿಕೊಂಡಿರುವುದರಿಂದ ಅಭಿಷೇಕ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಿದರೆ, ಫಿನಿಶರ್ ಆಗಿ ಜಿತೇಶ್‌ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು ಅನ್ನಲಾಗ್ತಿದೆ. ಇನ್ನೊಂದು ಕಡೆ ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಭಾರತದ ನಂಬಿಗಸ್ಥ ಟಿ20 ಆರಂಭಿಕ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಸಂಜು ಸ್ಯಾಮ್ಸನ್, ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 3 ಸೆಂಚುರಿ ಬಾರಿಸಿದ್ದಾರೆ. ಇನ್ನು ಕೇರಳ ಕ್ರಿಕೆಟ್ ಲೀಗ್‌ನಲ್ಲೂ ಓಪನ್ನರ್ ಆಗಿ ಕಣಕ್ಕಿಳಿಸಿದು ಬೌಂಡರಿ-ಸಿಕ್ಸರ್ ಸಿಡಿಸುವ ಮೂಲಕ ತಾನೆಷ್ಟು ಡೇಂಜರಸ್ ಓಪನ್ನರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಈ ಸಲ ಈ ಇಬ್ಬರಲ್ಲಿ ಯಾರಿಗೆ ಟೀಂ ಮ್ಯಾನೇಜ್‌ಮೆಂಟ್ ಮಣೆ ಹಾಕುತ್ತೆ ಕಾದು ನೋಡಬೇಕಿದೆ.
ಇನ್ನು ದುಬೈ ಸ್ಪಿನ್ ಸ್ನೇಹಿ ಪಿಚ್ ಆಗಿರೋದ್ರಿಂದ ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯುವುದು ಬಹುತೇಕ ಕನ್ಫರ್ಮ್ ಆಗಿದೆ. ಇನ್ನು ಬುಮ್ರಾ ಕಳೆದ ಟಿ20 ವಿಶ್ವಕಪ್ ಬಳಿಕ ಮೊದಲ ಸಲ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದು, ಬುಮ್ರಾ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ. ಬುಮ್ರಾಗೆ ವೇಗದ ಬೌಲಿಂಗ್‌ನಲ್ಲಿ ಅರ್ಶದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಸಾಥ್ ನೀಡಲು ರೆಡಿಯಾಗಿದ್ದಾರೆ.