ಫಾರ್ಮ್‌ಗೆ ಬರಲು KL ರಾಹುಲ್‌ಗೆ ಇನ್ನೆಷ್ಟು ಇನಿಂಗ್ಸ್ ಬೇಕು..?

ಕಳಪೆ ಫಾರ್ಮ್’ನಿಂದ ಟೆಸ್ಟ್ ಹಾಗೂ ಏಕದಿನ ತಂಡದಿಂದ ಹೊರಬಿದ್ದಿರುವ ಕೆ.ಎಲ್ ರಾಹುಲ್, ದೇಶಿ ಟೂರ್ನಿ ವಿಜಯ್ ಹಜಾರೆಯಲ್ಲಿ ಮಿಂಚುವ ಮೂಲಕ ಬಾಂಗ್ಲಾದೇಶ ವಿರುದ್ಧದ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

First Published Nov 4, 2019, 5:34 PM IST | Last Updated Nov 4, 2019, 5:34 PM IST

ಬೆಂಗಳೂರು[ನ.04]: ಕರ್ನಾಟಕದ ಕ್ರಿಕೆಟಿಗ ಕೆ.ಎಲ್. ರಾಹುಲ್’ಗೆ ಫಾರ್ಮ್’ಗೆ ಕಮ್’ಬ್ಯಾಕ್ ಮಾಡಲು ಟೀಂ ಇಂಡಿಯಾದಲ್ಲಿ ಸಿಕ್ಕಷ್ಟು ಅವಕಾಶ ಬಹುಶಃ ಬೇರೆ ಆಟಗಾರರಿಗೆ ಸಿಕ್ಕಿಲ್ಲವೇನೋ. ಆ ಮಟ್ಟಿಗೆ ಅವಕಾಶಗಳು ರಾಹುಲ್’ಗೆ ಸಿಕ್ಕಿವೆ.

ರಾಜಧಾನಿಯಲ್ಲಿ ನಡೆಯಲಿಲ್ಲ ಆಟ; ಬಾಂಗ್ಲಾದೇಶ ವಿರುದ್ದ ಸೋಲು ಕಂಡ ಭಾರತ!

ಕಳಪೆ ಫಾರ್ಮ್’ನಿಂದ ಟೆಸ್ಟ್ ಹಾಗೂ ಏಕದಿನ ತಂಡದಿಂದ ಹೊರಬಿದ್ದಿರುವ ಕೆ.ಎಲ್ ರಾಹುಲ್, ದೇಶಿ ಟೂರ್ನಿ ವಿಜಯ್ ಹಜಾರೆಯಲ್ಲಿ ಮಿಂಚುವ ಮೂಲಕ ಬಾಂಗ್ಲಾದೇಶ ವಿರುದ್ಧದ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಬೆನ್ನಿನ ಜೊತೆಗೆ ಮೆದುಳಿಗೂ ಶಸ್ತ್ರಚಿಕಿತ್ಸೆ; ಹಾರ್ದಿಕ್ ಟ್ರೋಲ್ ಮಾಡಿದ ರಾಹುಲ್!

ಕೆ.ಎಲ್ ಐಸಿಸಿ ಏಕದಿನ ವಿಶ್ವಕಪ್’ನಿಂದೀಚೆಗೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು KL ರಾಹುಲ್ ಫಾರ್ಮ್’ಗೆ ಬರಲು ಇನ್ನೆಷ್ಟು ಇನಿಂಗ್ಸ್ ಬೇಕು ಎಂದು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...