Asianet Suvarna News Asianet Suvarna News

ಕೊರೋನಾ ಎಫೆಕ್ಟ್‌: ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ| ಧಾರವಾಡ ನಗರದಲ್ಲಿ ನಡೆದ ಘಟನೆ|ಲಾಕ್‌ಡೌನ್‌ ಆದಾಗಿನಿಂದ ಮದ್ಯದಂಗಡಿಗಳು ತೆರೆದಿಲ್ಲ| 

First Published Mar 29, 2020, 3:28 PM IST | Last Updated Mar 29, 2020, 3:28 PM IST

ಧಾರವಾಡ(ಮಾ.29): ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಉಮೇಶ ಹಡಪದ ಎಂಬುವರೇ ಆತ್ಮಹತ್ಯೆ ಶರಣಾದ ವ್ಯಕ್ತಿಯಾಗಿದ್ದಾರೆ. ಕೊರೋನಾ ವೈರಸ್‌ ತಡೆಗಟ್ಟಲು ಇಡೀ ದೇಶವೇ ಲಾಕ್‌ಡೌನ್‌ ಆಗಿದೆ.

ಕೊರೋನಾ ಎಫೆಕ್ಟ್: ಇಟಲಿ ಜನರ ಬದುಕಿಗೆ ಕೊಳ್ಳಿಯಿಟ್ಟ ಫುಟ್ಬಾಲ್ ಆಟ..!

ಹೀಗಾಗಿ ಲಾಕ್‌ಡೌನ್‌ ಆದಾಗಿನಿಂದ ಮದ್ಯದಂಗಡಿಗಳು ತೆರೆದಿಲ್ಲ. ಹೀಗಾಗಿ ಮದ್ಯ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಉಮೇಶ ಹಡಪದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಉಮೇಶ ಹಡಪದ ನಿರ್ಮಾಣ ಹಂತದ ಕಟ್ಟಡದ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದನು. 
 

Video Top Stories