Asianet Suvarna News Asianet Suvarna News

ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ದೃಢ: ಕುಡಚಿಯಲ್ಲಿ ಹೈಅಲರ್ಟ್‌

ಕುಡಚಿ ಪಟ್ಟಣದ ನಾಲ್ವರಿಗೆ ಕೊರೋನಾ ಸೋಂಕು ದೃಢ| ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣ|ಮೂವರು ಮಹಿಳೆಯರು, ಓರ್ವ ಪುರಷನಿಗೆ ಕೋವಿಡ್-19 ಸೋಂಕು| ಕುಡಚಿ ಪಟ್ಟಣದಲ್ಲಿ ಹೈಅಲರ್ಟ್‌ ಜಾರಿ|

ಬೆಳಗಾವಿ(ಏ.06): ದೆಹಲಿಯ ನಿಜಾಮುದ್ದಿನ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಕುಡಚಿ ಪಟ್ಟಣದ ನಾಲ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮೂವರು ಮಹಿಳೆಯರು, ಓರ್ವ ಪುರಷನಿಗೆ ಕೋವಿಡ್-19 ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 7 ಕ್ಕೇರಿದೆ. 

ಏಪ್ರಿಲ್ 14 ರ ನಂತರವೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ?

ಮುಂಜಾಗ್ರತಾ ಕ್ರಮವಾಗಿ ಕುಡಚಿ ಪಟ್ಟಣದಲ್ಲಿ ಹೈಅಲರ್ಟ್‌ ಘೋಷಿಸಿಲಾಗಿದೆ. ವಾಹನಗಳ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಆರಂಭವಾಗಿದೆ. 
 

Video Top Stories