ದೆಹಲಿ ಏಮ್ಸ್ನ 9 ತಿಂಗಳ ಗರ್ಭಿಣಿ ವೈದ್ಯೆಗೂ ಕೊರೋನಾ ಸೋಂಕು!
- ದೆಹಲಿಯ ವೈದ್ಯ ದಂಪತಿ ಕೊರೋನಾವೈರಸ್ ಪಾಸಿಟಿವ್
- ನಿನ್ನೆ ಪತಿ ಕೊವಿಡ್-19 ಪಾಸಿಟಿವ್, ಇವತ್ತು ಪತ್ನಿ ಪಾಸಿಟಿವ್
- 9 ತಿಂಗಳ ಗರ್ಭಿಣಿ ಪತ್ನಿ, ಏಮ್ಸ್ನಲ್ಲೇ ಹೆರಿಗೆಗೆ ಸಿದ್ಧತೆ
ನವದೆಹಲಿ (ಏ.03): ದೆಹಲಿಯ ವೈದ್ಯ ದಂಪತಿಗೆ ಕೊರೋನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಏಮ್ಸ್ನಲ್ಲಿ ಕೆಲಸ ಮಾಡುವ ಪತಿಗೆ ನಿನ್ನೆ ಕೊವಿಡ್-19 ದೃಢಪಟ್ಟಿತ್ತು. ಇಂದು ಅವರ ಪತ್ನಿಗೂ ಸೋಂಕು ಇರುವುದು ಪತ್ತೆಯಾಗಿದೆ. ಪತ್ನಿಯೂ ವೈದ್ಯೆಯಾಗಿದ್ದು, 9 ತಿಂಗಳ ಗರ್ಭಿಣಿ. ಏಮ್ಸ್ನಲ್ಲೇ ಹೆರಿಗೆಗೆ ಸಿದ್ಧತೆ ನಡೆಸಲಾಗಿದೆ.
ಇದನ್ನೂ ನೋಡಿ | ಆಶಾ ಕಾರ್ಯಕರ್ತೆಯರು, ಡಾಕ್ಟರ್ಸ್ ಮೇಲೆ ಹಲ್ಲೆ ಮಾಡಿದ್ರೆ ಜಾಮೀನೂ ಸಿಗಲ್ಲ: ಭಾಸ್ಕರ್ ರಾವ್...
ಕೊರೋನಾ ಕ್ವಾರಂಟೈನ್ನಲ್ಲಿರುವವರ ಪತ್ತೆಗೂ ಬಂತು App; ಸೋಂಕಿತರ ಬಗ್ಗೆ ಸಿಗುತ್ತೆ ಮಾಹಿತಿ...
"