ರಾಜಮೌಳಿಗಾಗಿ ಯಾವ ನಟರು ಹೇಗೆ ಬದಲಾಗಿದ್ದಾರೆ ಗೊತ್ತಾ? ಹೇಗಿರುತ್ತೆ ಸಿನಿಮಾ ತಯಾರಿ ?
ಅವತ್ತು ಪ್ರಭಾಸ್‌ಗೆ ಚಳಿ ಬಿಡಿಸಿದ್ದ ರಾಜಮೌಳಿ
ರಾಜಮೌಳಿಯಿಂದ ಸಣ್ಣ ಆಗಿದ್ದ ಜೂ.ಎನ್‌ಟಿಆರ್
ರಾಜಮೌಳಿ ಅಂದ್ರೆ ಸುಮ್ನೆ ಅಲ್ಲ..ಕಷ್ಟ ತಪ್ಪಿದ್ದಲ್ಲ
ನಿರ್ದೇಶಕ ರಾಜಮೌಳಿ(SS Rajamouli) ಹಲವು ನಟರಿಗೆ ಮೇಷ್ಟ್ರು ಆಗಿದ್ದಾರೆ. ಇವರು ಸದ್ಯ ನಟ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಮಹೇಶ್ ಬಾಬುಗೆ(Mahesh Babu) ಸಿಕ್ಸ್ ಪ್ಯಾಕ್(Six Pack) ಮಾಡುವಂತೆ ಹೇಳಿದ್ದಾರಂತೆ. ಹಾಗಾಗಿ ನಟ ಸದ್ಯ ಜಿಮ್‌ನಲ್ಲಿ ಬ್ಯೂಜಿಯಾಗಿದ್ದಾರೆ. ಸಾಮಾನ್ಯವಾಗಿ ಮಹೇಶ್ ಬಾಬು ಯಾವುದೇ ಸಿನಿಮಾ ಸಲುವಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿರಲಿಲ್ಲ. ಆದರೆ ಈ ಬಾರಿ ಅವರು ರಾಜಮೌಳಿ ನಿರ್ದೇಶನದ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸಿನಿಮಾದ ಕಥಾನಾಯಕ ಫಿಟ್ ಆಗಿ ಕಾಣಬೇಕು ಎಂಬುದು ರಾಜಮೌಳಿ ಅವರ ಉದ್ದೇಶವಾಗಿದೆ. ಅದಕ್ಕಾಗಿ ಪ್ರಭಾಸ್, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಮುಂತಾದ ನಟರು ದೇಹವನ್ನು ಹುರಿಗೊಳಿಸಿಕೊಂಡು ಶೂಟಿಂಗ್ನಲ್ಲಿ ಭಾಗಿ ಆಗಿದ್ದರು.
ಇದನ್ನೂ ವೀಕ್ಷಿಸಿ: ಹಳ್ಳಿಹಕ್ಕಿ ಗಾಯನಕ್ಕೆ ಮನಸೋತ ಕನ್ನಡಿಗರು: ಕುರಿ ಕಾಯುವ ಹೈದನೊಳಗೊಬ್ಬ ಅಪ್ರತಿಮ ಗಾಯಕ !