KGF 2 ಗೆಲುವಿನ ರಹಸ್ಯ ಮೇಕಿಂಗ್‌ನಲ್ಲಿ ರಿವೀಲ್!

ಭಾರತೀಯ ಚಿತ್ರರಂಗದ ಇತಿಹಾಸದ ಪುಟದಲ್ಲಿ ಕೆಜಿಎಫ್ ಒಂದು ದಾಖಲೆಯಾಗಿ ಅಚ್ಚೊತ್ತಿದೆ. ರಾಕಿಯ ಅಬ್ಬರವನ್ನ ಇಡೀ ದೇಶದ ಸಿನಿ ಪ್ರೇಕ್ಷಕರು ಕಳೆದ 20 ದಿನಗಳಿಂದ ಕಣ್ತುಂಬಿಕೊಳ್ಳುತ್ತಿದೆ. ಬಾಕ್ಸಾಫೀಸ್ ನಲ್ಲಿ ಅಕ್ಷರಶಃ ಸುನಾಮಿಯನ್ನೇ ಎಬ್ಬಿಸಿರೋ ಕೆಜಿಎಫ್-2 ಸಿನಿಮಾದ ಹಿಂದೆ ಹಲವರ ಪರಿಶ್ರಮ ಇದೆ.

Share this Video
  • FB
  • Linkdin
  • Whatsapp

ಭಾರತೀಯ ಚಿತ್ರರಂಗದ ಇತಿಹಾಸದ ಪುಟದಲ್ಲಿ ಕೆಜಿಎಫ್ ಒಂದು ದಾಖಲೆಯಾಗಿ ಅಚ್ಚೊತ್ತಿದೆ. ರಾಕಿಯ ಅಬ್ಬರವನ್ನ ಇಡೀ ದೇಶದ ಸಿನಿ ಪ್ರೇಕ್ಷಕರು ಕಳೆದ 20 ದಿನಗಳಿಂದ ಕಣ್ತುಂಬಿಕೊಳ್ಳುತ್ತಿದೆ. ಬಾಕ್ಸಾಫೀಸ್ ನಲ್ಲಿ ಅಕ್ಷರಶಃ ಸುನಾಮಿಯನ್ನೇ ಎಬ್ಬಿಸಿರೋ ಕೆಜಿಎಫ್-2 ಸಿನಿಮಾದ ಹಿಂದೆ ಹಲವರ ಪರಿಶ್ರಮ ಇದೆ. ಕೆಜಿಎಫ್ ಅನ್ನೋ ಚಿನ್ನ ಸೃಷ್ಟಿಯಾಗೋಕೆ ನೂರಾರು ಜನರ ಕಷ್ಟ ಪಟ್ಟಿದ್ದಾರೆ. ಕೆಜಿಎಫ್ ಸಿನಿಮಾದ ಮೇಕಿಂಗ್ ನೋಡಿ ಸಿನಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಬ್ಲ್ಯಾಕ್ ಶೇಡ್ ನಲ್ಲಿ ಇಡೀ ಸಿನಿಮಾ ಮೂಡಿಬಂದಿದೆ. ಇದಕ್ಕೆ ಮೇಕಪ್ ಆರ್ಟಿಸ್ಟ್ ಗಳ ಶ್ರಮ ಕೂಡ ಹೆಚ್ಚಿದೆ. ಮೇಕಪ್ ಆರ್ಟಿಸ್ಟ್ ಡಿಪಾರ್ಟ್ಮೆಂಟ್ ಕೆಜಿಎಫ್ ಸಿನಿಮಾದ ಸಾವಿರಾರು ಕಲಾವಿದರು, ಸಹಕಲಾವಿದರಿಗೆ ಮೇಕಪ್ ಮಾಡಿ ಗೆದ್ದಿದ್ದಾರೆ.

Related Video