Asianet Suvarna News Asianet Suvarna News

ಪ್ರಭಾಸ್ ಮದುವೆ ಯಾವಾಗ? ಜ್ಯೋತಿಷಿಯ ಶಾಕಿಂಗ್ ಭವಿಷ್ಯ!

ಟಾಲಿವುಡ್‌ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾ ಮಾಡ್ತಾರೋ ಬಿಡ್ತಾರೋ ಆದ್ರೆ ಪ್ರಭಾಸ್ ಮದ್ವೆ ಯಾವಾಗ ಆಗ್ತಾರೆ ಅನ್ನೋ ನ್ಯೂಸ್ ಮಾತ್ರ ಅವ್ರ ಅಭಿಮಾನಿಗಳ ತಲೆಯಲ್ಲಿ ಗಿರ್ಕಿ ಹೊಡೆಯುತ್ತಿದೆ.

First Published Aug 21, 2022, 11:56 AM IST | Last Updated Aug 21, 2022, 11:56 AM IST

ಟಾಲಿವುಡ್‌ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾ ಮಾಡ್ತಾರೋ ಬಿಡ್ತಾರೋ ಆದ್ರೆ ಪ್ರಭಾಸ್ ಮದ್ವೆ ಯಾವಾಗ ಆಗ್ತಾರೆ ಅನ್ನೋ ನ್ಯೂಸ್ ಮಾತ್ರ ಅವ್ರ ಅಭಿಮಾನಿಗಳ ತಲೆಯಲ್ಲಿ ಗಿರ್ಕಿ ಹೊಡೆಯುತ್ತಿದೆ. ಪ್ರಭಾಸ್ ಮದ್ವೆ ಯಾವಾಗ ಅಂತಿದ್ದವ್ರಿಗಾಗಿ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಪ್ರಭಾಸ್ ಮದ್ವೆ ಆದ್ರೆ ಜೀವನ ಚೆನ್ನಾಗಿರೋದಿಲ್ವಂತೆ . ಮದುವೆ ನಂತರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆಯಂತೆ. ಮದುವೆ ನಂತರ ಗಂಡ-ಹೆಂಡತಿ ನಡುವೆ ಸಮಸ್ಯೆ ಶುರುವಾಗಬಹುದು. ಆರೋಗ್ಯ ಸಮಸ್ಯೆ ಮುಖ್ಯವಾಗಿ ಕಾಡಬಹುದು ಎಂದು ಭವಿಷ್ಯ ನುಡಿದ್ದಿದ್ದಾರೆ. ಸದ್ಯ ಈ ವಿಚಾರ ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕಾರಣ ಈ ಹಿಂದೆ ಸಮಂತ ಹಾಗೂ ರಶ್ಮಿಕಾ ವಿಚಾರದಲ್ಲಿ ವೇಣು ಸ್ವಾಮಿ ಹೇಳಿದ ಭವಿಷ್ಯ ನಿಜವಾಗಿದ್ದು, ಪ್ರಭಾಸ್ ವಿಚಾರದಲ್ಲಿಯೂ ಸತ್ಯವಾದ್ರೆ ಏನ್ ಮಾಡೋದು ಅನ್ನೋದು ಫ್ಯಾನ್ಸ್ ಆತಂಕ..