ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?

ದರ್ಶನ್ ಧರ್ಮಪತ್ನಿ, ವಿಜಯಲಕ್ಷ್ಮಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ದಾಸ ಇಲ್ಲದೆ ಹುಟ್ಟುಹಬ್ಬದ ಸಡಗರ ಇಲ್ಲ. ಆದ್ರೆ ವಿಜಯಲಕ್ಷ್ಮಿ ಬರ್ತ್​ಡೇ ಅಂದ್ರೆ ಈಗ ತಟ್ ಅಂತ ನೆನಪಾಗೋದು ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾ ಜಗಳ.

Share this Video
  • FB
  • Linkdin
  • Whatsapp

ದರ್ಶನ್ ಧರ್ಮಪತ್ನಿ, ವಿಜಯಲಕ್ಷ್ಮಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ದಾಸ ಇಲ್ಲದೆ ಹುಟ್ಟುಹಬ್ಬದ ಸಡಗರ ಇಲ್ಲ. ಆದ್ರೆ ವಿಜಯಲಕ್ಷ್ಮಿ ಬರ್ತ್​ಡೇ ಅಂದ್ರೆ ಈಗ ತಟ್ ಅಂತ ನೆನಪಾಗೋದು ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾ ಜಗಳ.. ಅಷ್ಟೆ ಅಲ್ಲ ದರ್ಶನ್ ಈ ಹಿಂದೆ ತನ್ನ ಪತ್ನಿಯ ಅದ್ಧೂರಿ ಹುಟ್ಟುಹಬ್ಬ ಆಚರಿಸಿದ್ದು. ಈ ಜನ್ಮದಿನವೇ ದರ್ಶನ್​​ರ ಈಗಿನ ಸ್ಥಿತಿಗೆ ಕಾರಣ ಆಯ್ತಾ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ...


ಎಸ್ ನವೆಂಬರ್ 11 ದರ್ಶನ್ ಪತ್ನಿ ವಿಜಯಲಕ್ಷ್ಮಿ ಹುಟ್ಟುಹಬ್ಬ. ಬರ್ತ್ ಡೇ ಸಂಬ್ರಮಿಸಬೇಕು ಅಂದ್ರೆ ಪತಿ ಜೊತೆಗಿಲ್ಲ. ದರ್ಶನ್ ಮೇಲಿರುವ ಕೇಸ್ ಬೇರೆ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಇಂಥ ಟೈಮ್ ನಲ್ಲಿ ಹೇಗೆ ತಾನೇ ಬರ್ತ್ ಡೇ ನ ನೆಮ್ಮದಿಯಾಗಿ ಸೆಲೆಬ್ರೇಟ್ ಮಾಡೋದಕ್ಕೆ ಸಾಧ್ಯ. ಅಸಲಿಗೆ ಪ್ರತಿ ವರ್ಷ ದರ್ಶನ್ ಪತ್ನಿಯ ಬರ್ತ್ ಡೇ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾ ಇದ್ರು. ಅದೆಷ್ಟು ಜಗಳ, ಮುನಿಸು ಇದ್ರೂ ಬರ್ತ್ ಡೇ ದಿನ ಮಾತ್ರ ಅದು ಮರೆತು ಹೋಗ್ತಾ ಇತ್ತು. ಪತ್ನಿಗೆ ಒಂದು ಸೊಗಸಾದ ಗಿಫ್ಟ್, ಒಂದು ಟ್ರೀಟ್ ದಾಸನ ಕಡೆಯಿಂದ ಇದ್ದೆ ಇರ್ತಾ ಇತ್ತು.

2024 ರಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಯನ್ನ ದುಬೈಗೆ ಕರೆದುಕೊಂಡು ಹೋಗಿದ್ರು ದರ್ಶನ್. ಆಗಷ್ಟೇ ಕಾಟೆರ ಸಕ್ಸೆಸ್ ಸಂಭ್ರಮ ನಡುವೆ ಪತ್ನಿ ಜೊತೆ ಜೊತೆಗೆ ಕುಶಿ ಕುಷಿಯಾಗಿ ಹಾಡಿ ಕುಣಿತಾ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ರು. ಅಲ್ಲಿನ ಸೆಲೆಬ್ರೇಷನ್ ಫೋಟೋಗಳನ್ನ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ರು. ಆದ್ರೆ ಇದಕ್ಕೆ ಕೌಂಟರ್ ಕೊಡುವಂತೆ ಪವಿತ್ರಾ ಕೂಡ ತಾನು ದರ್ಶನ್ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ಲು. ತಮ್ಮ ಸಂಬಂಧಕ್ಕೆ ದಶಕ ತುಂಬಿದೆ ಅಂತ ಸೋಶಿಯಲ್ ಮಿಡಿಯ ಪೋಸ್ಟ್ ಹಾಕಿದ್ಲು.

ಇದೇ ವಿಚಾರವಾಗಿ ವಿಜಯಲಕ್ಷ್ಮಿ ಮತ್ತು ಪವಿತ್ರಾ ನಡುವೆ ವಾರ್ ನಡೆದಿತ್ತು. ಇಬ್ಬರ ಗಲಾಟೆ ತಾರಕಕ್ಕೆ ಏರಿತ್ತು. ಇದರ ಬಗ್ಗೆ ಕಾಟೆರ ಸಕ್ಸೆಸ್ ಮೀಟ್ ನಲ್ಲಿ ಮಾತನಾಡಿದ್ದ ದರ್ಶನ್, ಇವತ್ತು ಅವಳಿರ್ತಾಳೆ, ನಾಳೆ ಇವಳಿರ್ತಾಳೆ.. ಅಂದುಬಿಟ್ಟಿದ್ದು ಭಾರಿ ಸದ್ದು ಮಾಡಿದ್ದು. ಈ ಎಲ್ಲಾ ಘಟನೆಗಳ ಬಳಿಕ ಪವಿತ್ರಾ ದರ್ಶನ್ ಮೇಲೆ ಮುನಿಸಿಕೊಂಡಿದ್ದಳಂತೆ. ಈ ಟೈಮ್ ನಲ್ಲೆ ರೇಣುಕಸ್ವಾಮಿ ಎಂಟ್ರಿ ಯಾಗ್ತಾನೆ. ಮುನಿಸಿಕೊಂಡ ಪವಿತ್ರಾ ನ ರಮಿಸೋಕೆ ರೇಣುಕಾ ಕಿಡ್ನಾಪ್ ನಡೀತಾ, ಹೌದು ಅಂತಿವೆ ತನಿಖೆಯಲ್ಲಿ ಬಯಲಾದ ಸಂಗತಿಗಳು.

ಅಸಲಿಗೆ ದರ್ಶನ್ ವಿಜಯಲಕ್ಷ್ಮಿ ಸಂಭ್ರಮವೇ ಇಂತದ್ದೊಂದು ದುರಂತಕ್ಕೆ ಪರೋಕ್ಷವಾಗಿ ಮುನ್ನುಡಿ ಬರೆದಿದ್ದು ವಿಪರ್ಯಾಸ. ಈ ನಡುವೆ ಪತಿ ಇಲ್ಲದೆ ನೋವಲ್ಲೇ ಬರ್ತ್ ಡೇ ಆಚರಿಸಿದ್ದಾರೆ ವಿಜಯಲಕ್ಷ್ಮಿ.

Related Video