Vijay-Rashmika Engagement: ಶ್ರೀವಲ್ಲಿಗೆ ಕಂಕಣ ಭಾಗ್ಯ..ಎಂಗೇಜ್‌ಮೆಂಟ್ ಸುದ್ದಿ ವೈರಲ್..!

ಟಾಲಿವುಡ್ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿರೋ ನಟಿ ರಶ್ಮಿಕಾ ಮಂದಣ್ಣ ಈಗ ಟಾಕ್ ಆಫ್ ದಿ ಮ್ಯಾಟರ್ ಆಗಿರೋದು ಮದುವೆ ವಿಚಾರಕ್ಕೆ. ಯಾವ್ ಇಂಡಸ್ಟ್ರಿಗೆ ಹೋದ್ರು ರಶ್ಮಿಕಾ ಮದುವೆ ಬಗ್ಗೆಯೇ ಮಾತು ಮಂಥನ ನಡೆಯುತ್ತಿದೆ. ಈ ನಡುವೆ ರಶ್ಮಿಕಾಗೆ ಮದುವೆ ದೋಷವೂ ಇದೆ ಅನ್ನೋ ಮಾತು ಇದೆ.

First Published Jan 8, 2024, 10:56 AM IST | Last Updated Jan 8, 2024, 10:56 AM IST

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರು ಪ್ರೀತಿಸುತ್ತಿದ್ದಾರೆ ಅನ್ನೋ ವಿಚಾರ ಗುಟ್ಟಾಗೇನು ಉಳಿದಿಲ್ಲ. ಈ ಜೋಡಿ ಮದುವೆ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆ ಮತ್ತು ಅಭಿಮಾನಿಗಳ ಆಸೆ. ಆದ್ರೆ ಮೊನ್ನೆ ಮೊನ್ನೆಯಷ್ಟೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ(Venu Swamy), ರಶ್ಮಿಕಾ-ವಿಜಯ್( Vijay Deverakonda) ಮದುವೆ ಆದ್ರೆ ಇಬ್ಬರ ದಾಂಪತ್ಯ ಮುರಿದು ಬೀಳುತ್ತೆ. ಇದು ಜೋತಿಷ್ಯದಲ್ಲೇ ಇದೆ ಅಂತ ಹೇಳಿದ್ರು. ರಶ್ಮಿಕಾ-ವಿಜಯ್ ಮದುವೆ ಫಿಕ್ಸ್ ಆಯ್ತಾ? ನಿಶ್ಚಿತಾರ್ಥದ ಡೇಟ್ ನಿಗದಿ ಆಗಿದೆಯಾ.? ವೈರಲ್ ಆಗಿದೆ ಕಿರಿಕ್ ಚೆಲುವೆ ಎಂಗೇಜ್‌ಮೆಂಟ್ ಸುದ್ದಿ. ಯೆಸ್ ಇದೆಲ್ಲಾ ಈಗ ರಶ್ಮಿಕಾ ಮಂದಣ್ಣ(Rashmika Mandanna) ಸುತ್ತ ಮುತ್ತ ನಡೆಯುತ್ತಿರೋ ಮ್ಯಾಟ್ರು. ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಏನೇ ಭವಿಷ್ಯ ಹೇಳಿದ್ರು, ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಮದುವೆ ಆಗ್ತಾರೆ. ಇಬ್ಬರ ಇಂಗೇಜ್ಮೆಂಟ್ ಡೇಟ್ ಫಿಕ್ಸ್ ಆಗಿದೆ ಅಂತ ಹೊಸ ಸುದ್ದಿಯೋಂದು ವೈರಲ್ ಆಗ್ತಿದೆ. ರಶ್ಮಿಕಾ ವಿಜಯ್ರದ್ದು ಗೀತಾ ಗೋವಿಂದ ಸಿನಿಮಾದಿಂದ ಶುರುವಾದ ಗೆಳೆತನ. ಈಗ ಈ ಸ್ನೇಹ ಪ್ರೀತಿಗೆ ತಿರುಗಿದೆ. ಪ್ರತಿ ಹಬ್ಬಕ್ಕೂ ವಿಜಯ್ ದೇವರಕೊಂಡ ಮನೆಗೆ ರಶ್ಮಿಕಾ ಹೋಗ್ತಾರೆ. ಮುಂಬೈನ ಬೀದಿಗಳಲ್ಲಿ ಸ್ಟಾರ್ ಹೋಟೆಲ್ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯೂ ಆಗ್ತಾರೆ. ಒಂದೇ ತರದ ಡ್ರೆಸ್ ಕೋಡ್ ಜೊತೆ ಫಾರಿನ್ ಟೂರ್ ಮಾಡಿ ಸಿಕ್ಕಾಕಿಕೊಳ್ತಾರೆ. ಈಗ ಈ ಜೋಡಿಯ ನಿಶ್ಚಿತಾರ್ಥ ಫೆಬ್ರವರಿ ಎರಡನೇ ವಾರ ಅಂದ್ರೆ ವ್ಯಾಲಂಟೇನ್ಸ್ ಡೇ ಆಸು ಪಾಸಿನಲ್ಲಿ ನಡೆಯಲಿದೆ ಅಂತ ಹೈದರಾಬಾದ್, ಬೆಂಗಳೂರು ಟು ಮುಂಬೈ ವರೆಗೂ ಸುದ್ದಿ ಹರಿದಾಡ್ತಿದೆ. 

ಇದನ್ನೂ ವೀಕ್ಷಿಸಿ:  Hombale Films: ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಪ್ಲ್ಯಾನ್..! ಈ ಭಾರಿ ಸಿಕ್ಕ ಆ ಸ್ಟಾರ್ ಹೀರೋ ಯಾರು..?

Video Top Stories