ರಜನಿಕಾಂತ್ ಸಮಾಜ ಸೇವೆಗೆ ಹೊಸ ಯೋಜನೆ..! ಬಡವರಿಗಾಗೆ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ತಲೈವಾ..!

ಸಮಾಜ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ. ಸಮಾಜಕ್ಕೆ ಏನಾದ್ರು ಕೊಡುಗೆ ಕೊಡಬೇಕು ಒಂದಿಷ್ಟು ಮಂದಿಗೆ ಆಸರೆ ಆಗಬೇಕು ಅನ್ನೋ ಮನಸ್ಸಿರಬೇಕು ಆ ಕೆಲಸ ಮಾಡಬೇಕು. ಇಡೀ ಪ್ರಪಂಚವೇ ಅವರನ್ನ ಕೊಂಡಾಡುತ್ತೆ. ಈಗ ನಟ ತಲೈವಾ ರಜನಿಕಾಂತ್‌ರನ್ನೂ ಇಡೀ ದೇಶ ಕೊಂಡಾಡುತ್ತಿದೆ. 

First Published Mar 5, 2024, 10:02 AM IST | Last Updated Mar 5, 2024, 10:03 AM IST

ರಜನಿಕಾಂತ್ ಸೂಪರ್ ಸ್ಟಾರ್.. ಕೋಟಿ ಕೋಟಿ ಆಸ್ತಿಯ ಒಡೆಯ. ಆದ್ರೆ ರಜನಿಕಾಂತ್(Rajinikanth) ಕೂಡ ಬಡವರ ಮನೆ ಹುಡುಗನಾಗಿದ್ದವರೇ. ಹೀಗಾಗಿ ಬಡವರ ಕಷ್ಟ ನಷ್ಟ ರಜನಿಗೆ ಚೆನ್ನಾಗೆ ಗೊತ್ತಿದೆ. ಅದ್ಕೇ ಈಗ ರಾಜಕೀಯ ಬೇಡ ಸಮಾಜವೇವೆ ಮಾಡಿದ್ರೆ ಸಾಕು ಅಂತ ಸೋಷಿಯಲ್ ವರ್ಕ್ಗೆ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಬಡವರಿಗಾಗೆ ದೊಡ್ಡ ಆಸ್ಪತ್ರೆ(Hospital) ಕಟ್ಟಿಸೋ ಯೋಜನೆ. ಎಷ್ಟೋ ಜನ ಬಡವರು ಆರೋಗ್ಯ ಸರಿ ಪಡಿಸಿಕೊಳ್ಳಲು ದುಡ್ಡಿಲ್ಲದೇ ನೊಂದು ಬೆಂದವರಿದ್ದಾರೆ. ಅಂತವರಿಗಾಗೆ ನಟ ರಜನಿಕಾಂತ್ ಬಡವರಿಗೆ(Poor people) ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಅಂತ ತಮಿಳುನಾಡಿನ(Tamilnadu) ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರದಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಲು ಹೊರಟಿದ್ದಾರೆ. ಎಲ್ಲಾ ಸೌಲಭ್ಯಗಳು ಇರೋ ಆ ಆಸ್ಪತ್ರೆ 12 ಎಕರೆ ಜಾಗದಲ್ಲಿ ಆ ಸುಸಜ್ಜಿತವಾಗಿ ತಲೆ ಎತ್ತಲಿದೆಯಂತೆ. ನಟ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ. ಹೊಸ ಪಕ್ಷ ಕಟ್ಟುತ್ತಾರೆ ಅಂತೆಲ್ಲಾ ಸುದ್ದಿ ಆಗಿದೆ. ರಾಜಕೀಯಕ್ಕೆ ಬರಲು ರಜಿನಿ ಕೂಡ ತುದಿಗಾಲಲ್ಲಿದ್ರು. ಆದ್ರೆ ಅನಾರೋಗ್ಯ ರಜನಿ ರಾಜಕೀಯ ಭವಿಷ್ಯವನ್ನ ಹಾಳುಮಾಡ್ತು. ಹೀಗಾಗಿ ತನ್ನ ರಾಜಕೀಯ ಪಕ್ಷವನ್ನು ಸಮಾಜ ಸೇವಾ ಸಂಘವನ್ನಾಗಿ ಬದಲಾವಣೆ ಮಾಡಿದ್ರು. ರಾಜಕೀಯ ಪ್ರವೇಶ ಮಾಡದಿದ್ರೂ ಜನಸೇವೆ ಮಾಡುತ್ತೇನೆ ಎಂದಿದ್ದ ತಲೈವಾ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಬೃಹತ್  ಆಸ್ಪತ್ರೆ ಕಟ್ಟುತ್ತಿದ್ದಾರೆ. ರಜನಿಯ ಈ ಮಹತ್ಕಾರ್ಯಕ್ಕೆ ಫ್ಯಾನ್ಸ್ ಕೈ ಮುಗಿಯುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Deepika Das: ಕರಿಮಣಿ ಮಾಲೀಕನ ಪರಿಚಯಿಸಿದ BIG BOSS ಬ್ಯೂಟಿ..! ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್..!

Video Top Stories