Urfi Javed: ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ ಎಂದ ಕಿರುತೆರೆ ನಟಿ

ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಉರ್ಫಿ ಜಾವೇದ್‌ ವಿಚಿತ್ರವಾದ ಬಟ್ಟೆಗಳನ್ನು ತೊಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ, ಕೈಯಲ್ಲಿ ಭಗವದ್ಗೀತೆ ಹಿಡಿದಿದ್ದರು.

First Published Jan 13, 2022, 3:37 PM IST | Last Updated Jan 13, 2022, 3:50 PM IST

ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಉರ್ಫಿ ಜಾವೇದ್‌ (Urfi Javed) ವಿಚಿತ್ರವಾದ ಬಟ್ಟೆಗಳನ್ನು ತೊಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸುದ್ದಿಯಾಗುತ್ತಿರುತ್ತಾರೆ. ಹಿಂದಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿರುವ ಉರ್ಫಿ, ಬಿಗ್‌ಬಾಸ್‌ನಲ್ಲಿ (Bigg Boss) ಭಾಗವಹಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ, ಕೈಯಲ್ಲಿ ಭಗವದ್ಗೀತೆ (Bhagavad Gita) ಹಿಡಿದಿದ್ದರು. ಹಾಗೇ ತಾವು ಧರಿಸಿದ್ದ ಟಿ-ಶರ್ಟ್ (T-Shirt)​ ಮೇಲೆ ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ ಎಂದು ಬರೆಯಲಾಗಿತ್ತು. ಈ ಎರಡು ವಿಚಾರಗಳಿಂದ ಉರ್ಫಿ ನೆಟ್ಟಿಗರ ಗಮನ ಸೆಳೆದಿದ್ದಾರೆ. 

KGF Yash: ಬಾಲಿವುಡ್​ನ ಬಿಗ್ ಪಿಕ್ಚರ್ ಶೋನಲ್ಲಿ ರಾಕಿ ಭಾಯ್​ ಹವಾ!

ಟಿ-ಶರ್ಟ್‌ ಬಗ್ಗೆ ಹೇಳಿಕೊಂಡಿರುವ ಉರ್ಫಿ ನಾನು ಎಲ್ಲಿಗೆ ಹೋದರು ಜನ ನನ್ನನ್ನು ನೀವು ಜಾವೇದ್‌ ಅಖ್ತರ್‌ (Javed Akhtar) ಅವರ ಮೊಮ್ಮಗಳಾ? ಎಂದು ಕೇಳುತ್ತಾರೆ. ನಾನು ಅವರ ಮೊಮ್ಮಗಳು ಅಲ್ಲ ಎನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಾಗಲಿ ಎಂದು ಅವರು ಈ ಟಿ-ಶರ್ಟ್‌ ಧರಿಸಿರುವೆ ಎಂದು ಹೇಳಿದ್ದಾರೆ. ಬಾಲಿವುಡ್‌ ಚಿತ್ರ ಚಿತ್ರ ಸಾಹಿತಿ ಜಾವೇದ್ ಅಖ್ತರ್​ ಮತ್ತು ಉರ್ಫಿ ಜಾವೇದ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಹೆಸರಿನಲ್ಲಿ ಜಾವೇದ್​ ಇರುವ ಕಾರಣಕ್ಕೆ ಉರ್ಫಿಯನ್ನು ಜಾವೇದ್​ ಅಖ್ತರ್​ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ. ಸದ್ಯ ಈ ವಿಡಿಯೋ ಸಖತ್​ ವೈರಲ್ (Viral)​ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment