ರಿಮೇಕ್ ಸಿನಿಮಾದಲ್ಲಿ ನಟಿಸಿಲ್ಲ ಮಹೇಶ್ ಬಾಬು, ರೆಕಾರ್ಡ್ ಆಯ್ತು ಆ ದಾಖಲೆ!

ಟಾಲಿವುಡ್ ಕಾಲಿವುಡ್, ಮಾಲಿವುಡ್ ಸ್ಯಾಂಡಲ್ವುಡ್, ಬಾಲಿವುಡ್ ಯಾವುದೇ ಚಿತ್ರರಂಗ ಆಗಲಿ ಆ ಸಿನಿ ರಂಗದಿಂದ ಒಂದ್ ಸಿನಿಮಾ ಹಿಟ್ ಆಯ್ತು ಅಂದ್ರೆ ಆ ಸಿನಿಮಾವನ್ನ ಬೇರೆ ಭಾಷೆ ಚಿತ್ರರಂಗದ ಸ್ಟಾರ್‌ಗಳು ರಿಮೇಕ್ (Remake) ಮಾಡೋದು ಕಾಮನ್. ಆದ್ರೆ ಈ ವಿಷಯದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ (Prince Mahesh Babu) ಉಳಿದೆಲ್ಲಾ ಸ್ಟಾರ್ ಹೀರೋಗಳಿಗಿಂತ ವಿಭಿನ್ನ. 

Share this Video
  • FB
  • Linkdin
  • Whatsapp

ಟಾಲಿವುಡ್ ಕಾಲಿವುಡ್, ಮಾಲಿವುಡ್ ಸ್ಯಾಂಡಲ್ವುಡ್, ಬಾಲಿವುಡ್ ಯಾವುದೇ ಚಿತ್ರರಂಗ ಆಗಲಿ ಆ ಸಿನಿ ರಂಗದಿಂದ ಒಂದ್ ಸಿನಿಮಾ ಹಿಟ್ ಆಯ್ತು ಅಂದ್ರೆ ಆ ಸಿನಿಮಾವನ್ನ ಬೇರೆ ಭಾಷೆ ಚಿತ್ರರಂಗದ ಸ್ಟಾರ್‌ಗಳು ರಿಮೇಕ್ (Remake) ಮಾಡೋದು ಕಾಮನ್. ಆದ್ರೆ ಈ ವಿಷಯದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ (Prince Mahesh Babu) ಉಳಿದೆಲ್ಲಾ ಸ್ಟಾರ್ ಹೀರೋಗಳಿಗಿಂತ ವಿಭಿನ್ನ. 

Add Asianetnews Kannada as a Preferred SourcegooglePreferred

'ಜೈಲರ್' ನಲ್ಲಿ ಶಿವಣ್ಣ-ರಜನಿ, ಹೇಗಿರಲಿದೆ ಕಾಂಬಿನೇಷನ್..?

ಯಾಕಂದ್ರೆ ಮಹೇಶ್ ಬಾಬು ಇದುವರೆಗೂ ಭೇರೆ ಭಾಷೆಯ ಸಿನಿಮಾವನ್ನ ತೆಲುಗುನಲ್ಲಿ ರಿಮೇಕ್ ಮಾಡಿಲ್ಲ. ತೆಲುಗುನ ಬಿಗ್ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜ್ಯೂ,ಎನ್ಟಿಆರ್, ರಾಮ್ ಚರಣ್, ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ಹೀರೋಗಳು ರಿಮೇಕ್ ಸಿನಿಮಾ ಮಾಡಿ ಗೆದ್ದಿದ್ದಾರೆ.

ಆದ್ರೆ ಪ್ರಿನ್ಸ್ ಮಹೇಶ್ ಬಾಬು ಮಾತ್ರ ಬೇರೆ ಭಾಷೆ ಚಿತ್ರವನ್ನ ರಿಮೇಕ್ ಮಾಡದೇ ಟಾಲಿವುಡ್ ಚಿತ್ರರಂಗ ಮಾತ್ರವಲ್ಲ ಸೌತ್ ಸಿನಿ ದುನಿಯಾದಲ್ಲೇ ಟಾಪ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಮಹೇಶ್ ಬಾಬು ರೀಮೇಕ್ ಸಿನಿಮಾ ಮಾಡದೇ ಇರೋದಕ್ಕೆ ಕಾರಣವೂ ಇದೆ. ಅದೇನ್ ಗೊತ್ತಾ ಮಹೇಶ್ ಬಾಬುಗೆ ರಿಮೇಕ್ ಸಿನಿಮಾ ಮಾಡಿ ಗೆಲ್ಲುತ್ತೇನೆ ಅನ್ನೋ ನಂಬಿಕೆ ಇಲ್ಲವಂತೆ. ಆದ್ರೆ ನನ್ ಸಿನಿಮಾಗಳು ಭೇರೆ ಭಾಷೆಯಲ್ಲಿ ರಿಮೇಕ್ ಆಗೋ ತರ ನಾನು ಕೆಲಸ ಮಾಡಬೇಕು ಅನ್ನೋ ನಂಬಿಕೆಯಿಂದ ಕೆಲಸ ಮಾಡ್ತಾರಂತೆ. 

Related Video