Asianet Suvarna News Asianet Suvarna News

ಮೆಗಾಸ್ಟಾರ್ ಚಿರಂಜೀವಿ ಫ್ಯಾಮಿಲಿ ಸೇರಲಿದ್ದಾರೆ ಮತ್ತೊಬ್ಬ ಹೀರೋಯಿನ್: ಏನಿದು ಗಾಸಿಪ್!

ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಬೆನ್ನಲ್ಲೇ ವೈಷ್ಣವ್ ತೇಜ್ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ. ತೆಲುಗು ನಟಿ ರೀತು ವರ್ಮಾ ಜೊತೆ ವೈಷ್ಣವ್ ಮದುವೆ ಎಂಬ ಸುದ್ದಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. 
 

ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ಇತ್ತೀಚೆಗೆ ಲಾವಣ್ಯ ತ್ರಿಪಾಠಿ ಜೊತೆ ಹಸೆಮಣೆ ಏರಿದ್ದರು. ಇದೀಗ ಈ ಬೆನ್ನಲ್ಲೇ ವೈಷ್ಣವ್ ತೇಜ್ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ. ತೆಲುಗು ನಟಿ ರೀತು ವರ್ಮಾ ಜೊತೆ ವೈಷ್ಣವ್ ಮದುವೆ ಎಂಬ ಸುದ್ದಿ ಸಖತ್ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ನಟಿ ರೀತು ಜೊತೆ ಹಲವು ವರ್ಷಗಳಿಂದ ವೈಷ್ಣವ್ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವರುಣ್- ಲಾವಣ್ಯ ಮದುವೆಗೆ ರೀತು ಹಾಜರಿ ಹಾಕಿದ್ದರು. ಮೆಗಾಸ್ಟಾರ್ ಕುಟುಂಬದ ಖಾಸಗಿ ಪಾರ್ಟಿಗಳಲ್ಲೂ ರೀತು ಕಾಣಿಸಿಕೊಂಡಿದ್ದರು. ವರುಣ್ ಬಳಿಕ ವೈಷ್ಣವ್-ರೀತು ಮದುವೆ ಎಂದೇ ಸಖತ್ ವೈರಲ್ ಆಗುತ್ತಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಲಾವಣ್ಯ ತ್ರಿಪಾಠಿ ಅವರ ಸ್ನೇಹಿತೆ ರೀತು ಹಾಗಾಗಿ ನಮ್ಮ ಮನೆಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದು ವೈಷ್ಣವ್ ಸ್ಪಷ್ಟನೆ ನೀಡಿದ್ದರು. ರೀತು ಜೊತೆಗಿನ ಮದುವೆ ವಿಚಾರವನ್ನ ತಳ್ಳಿಹಾಕಿದ್ದರು.
 

Video Top Stories