Asianet Suvarna News Asianet Suvarna News

ರಾವಣನ ಪಾತ್ರಕ್ಕೆ ಕೆಜಿಗಟ್ಟಲೆ ರಿಯಲ್ ಚಿನ್ನವನ್ನೇ ಧರಿಸುತ್ತಾರೆ ಕೆಜಿಎಫ್‌ನ ರಾಕಿಂಗ್ ಸ್ಟಾರ್ ಯಶ್!

ರಾವಣ ಆಗಲಿರೋ ಯಶ್ ಸಿನಿಮಾದಲ್ಲಿ ಕೋಟಿ ಕೋಟಿ ಬೆಲೆ ಬಾಳೋ ರಿಯಲ್ ಚಿನ್ನವನ್ನೇ ಧರಿಸಿ ಕ್ಯಾಮೆರಾ ಮುಂದೆ ನಟಿಸುತ್ತಾರಂತೆ. ವಜ್ರಕಚಿತ ಕಿರೀಟ ಚಿನ್ನದ ಹಾರಗಳನ್ನ ಬಳಸುತ್ತಾರೆ ಅಂತ ಬಾಲಿವುಡ್​ ನಿಂದ ಸಿದ್ದಿ ಲೀಕ್ ಆಗಿದೆ. 

ರಾಕಿಂಗ್ ಸ್ಟಾರ್ ಯಶ್ ಚಿನ್ನದ ಹುಡುಗ.. ಕೆಜಿಎಫ್​ ಮೂವಿ ಬಂದ ಮೇಲೆ ಈ ಮಾತನ್ನ ಅವ್ರ ಫ್ಯಾವ್ಸ್ ಯಾವಾಗ್ಲು ಹೇಳ್ತಾನೆ ಇರುತ್ತಾರೆ. ಅದು ನಿಜ ಕೂಡ ಚಿನ್ನದ ಹಟ್ಟಿ ಕೆಜಿಎಫ್​ ಕಥೆಯನ್ನ ಫಿಲ್ಮಿ ಸ್ಟೈಲ್​​​ನಲ್ಲಿ ತೋರಿಸಿದ್ರು ಯಶ್​. ಕಪ್ಪು ಮಣ್ಣಿಕೆ ಕೆಜಿಎಫ್​ ಧೂಳಲ್ಲಿ ಸೃಷ್ಟಿಯಾದ ಆ ಸಿನಿಮಾ ಬಾಕ್ಸಾಫೀಸ್​ನಲ್ಲಿ ಚಿನ್ನದ ಬೇಡಿಕೆಯಂತೆ ಕಮಾಯಿ ಮಾಡಿತ್ತು. ಈಗ ಇದೇ ಚಿನ್ನದ ಹುಡುಗ ತನ್ನ ಮೈ ಮೇಲೆ ಕೋಟಿ ಕೋಟಿ ಬೆಲೆ ಬಾಳೋ ಚಿನ್ನವನ್ನೆಲ್ಲಾ ಧರಿಸಿಕೊಂಡು ತೆರೆ ಮೇಲೆ ಬರೋದಕ್ಕೆ ಸಜ್ಜಾಗಿದ್ದಾರೆ. ಬಾಲಿವುಡ್​ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಅಧಿಕೃತವಾಗಿ ಘೋಷಣೆ ಆಗೋ ಮೊದಲೇ ದಿನಕ್ಕೊಂದು ಸುದ್ದಿ ಕೇಳಿ ಬರ್ತಿದೆ. 

ಸಿನಿಮಾ ಬಜೆಟ್, ಸ್ಟಾರ್‌ಕಾಸ್ಟ್, ಶೂಟಿಂಗ್ ಬಗ್ಗೆ ನಾನಾ ಬಗೆಯ ಸುದ್ದಿ ವೈರಲ್ ಆಗುತ್ತಿದೆ. ಈಗ ಈ ಸಿನಿಮಾದಲ್ಲಿ ರಾವಣ ರೋಲ್ ಮಾಡೋ ಯಶ್​ ಬಗ್ಗೆ ಹೊಸದೊಂದು ಸುದ್ದಿ ಸಿಕ್ಕಿದೆ. ರಾವಣ ಆಗಲಿರೋ ಯಶ್ ಸಿನಿಮಾದಲ್ಲಿ ಕೋಟಿ ಕೋಟಿ ಬೆಲೆ ಬಾಳೋ ರಿಯಲ್ ಚಿನ್ನವನ್ನೇ ಧರಿಸಿ ಕ್ಯಾಮೆರಾ ಮುಂದೆ ನಟಿಸುತ್ತಾರಂತೆ. ವಜ್ರಕಚಿತ ಕಿರೀಟ ಚಿನ್ನದ ಹಾರಗಳನ್ನ ಬಳಸುತ್ತಾರೆ ಅಂತ ಬಾಲಿವುಡ್​ ನಿಂದ ಸಿದ್ದಿ ಲೀಕ್ ಆಗಿದೆ. ನಮಿತ್ ಮಲ್ಹೋತ್ರ ಜೊತೆ ಸೇರಿ ನಟ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಣದ ಜೊತೆ ರಾವಣ ರೋಲ್ ನಿಭಾಯಿಸಲಿರೋ ಯಶ್, ಇಲ್ಲಿ ನಿಜವಾದ ಚಿನ್ನ ಬಳಸಿ ಸಿದ್ಧಪಡಿಸಿದ ವೇಷಭೂಷಣದಲ್ಲಿ ಕಂಗೊಳಿಸುತ್ತಾರಂತೆ. 

ರಾವಣ ಲಂಕೆಯ ರಾಜನಾಗಿದ್ದ. ಹಿಂದೂ ಪುರಾಣಗಳಲ್ಲಿ ಲಂಕಾದ ಸುವರ್ಣ ನಗರವನ್ನು ಭಗವಾನ್ ವಿಶ್ವಕರ್ಮ ನಿರ್ಮಿಸಿದನೆಂದು ನಂಬಲಾಗಿದೆ. ಹಾಗಾಗಿ ಆ ಪಾತ್ರವನ್ನು ಮತ್ತೆ ತೆರೆ ಮೇಲೆ ತರಲು ನೈಜ ಬಂಗಾರವನ್ನು ಬಳಸಲಾಗುತ್ತಿದೆಯಂತೆ. ಗಗನ್ ಅಗರ್‌ವಾಲ್ ಹಾಗೂ ದಿನೇಶ್ ಶರ್ಮಾ 'ರಾಮಾಯಣ' ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಎ. ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಾರೆ ಅಂತ ಟಾಕ್ ಇದೆ. ರಾಮನಾಗಿ ರಣಬೀರ್ ಕಪೂರ್​, ಸೀತೆಯಾಗಿ ಸಾಯಿ ಪಲ್ಲವಿ ಆಗ್ಲೇ ಶೂಟಿಂಗ್ ಸೆಟ್​ಗೆ ಹೊಗಿದ್ದಾರೆ. ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಮಂಥರಾ ಆಗಿ ಶಿಬಾ ಚಡ್ಡಾ, ವಿಭೀಷಣ ಆಗಿ ವಿಜಯ್ ಸೇತುಪತಿ, ಕೌಸಲ್ಯ ಆಗಿ ಇಂದಿರಾ ಕೃಷ್ಣನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. 

Video Top Stories