The Kashmir Files: ಬಾಕ್ಸಾಫೀಸ್‌ನಲ್ಲಿ ಕಾಶ್ಮೀರ್ ಫೈಲ್ ಅನಿರೀಕ್ಷಿತ ದಾಖಲೆ!

ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ನೂರಾರು ಕೋಟಿ ಲಾಭ ಪಡೆಯೋ ಸಿನಿಮಾಗಳ ಟ್ರೆಂಡ್ ಒಂದು ಕಡೆಯಾದರೆ, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿ ನೂರಾರು ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ಮತ್ತೊಂದು ಟ್ರೆಂಡ್ ಚಿತ್ರರಂಗದಲ್ಲಿದೆ.

Share this Video
  • FB
  • Linkdin
  • Whatsapp

ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ನೂರಾರು ಕೋಟಿ ಲಾಭ ಪಡೆಯೋ ಸಿನಿಮಾಗಳ ಟ್ರೆಂಡ್ ಒಂದು ಕಡೆಯಾದರೆ, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡಿ ನೂರಾರು ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ಮತ್ತೊಂದು ಟ್ರೆಂಡ್ ಚಿತ್ರರಂಗದಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿ ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿದ ಸಿನಿಮಾಗಳ ಲೀಸ್ಟ್‌ಗೆ ಈಗ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಸೇರಿಕೊಂಡಿದೆ. ಯಾಕಂದರೆ ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಸಾಧನೆ ಮಾಡಿದೆ. ಯಾವುದೇ ಕಮರ್ಷಿಯಲ್ ಅಂಶಗಳನ್ನು ನೆಚ್ಚಿಕೊಳ್ಳದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 257 ಕೋಟಿ ಗಳಿಸುವ ಮೂಲಕ ಈ ಹಿಂದೆ 'ಉರಿ ದ ಸರ್ಜಿಕಲ್ ಸ್ಟ್ರೈಕ್' (Uri The Surgical Strike) ಸಿನಿಮಾ ಮಾಡಿದ್ದ ದಾಖಲೆಯನ್ನು ಬ್ರೇಕ್ ಮಾಡಿದೆ. 

ಸೈಬರ್ ಹ್ಯಾಕರ್ಸ್ ಕೈಯಲ್ಲಿ ಭಾರತದ ಟ್ರೆಂಡಿಂಗ್ ಸಿನಿಮಾ 'The Kashmir Files'

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತಯಾರಾಗಿದ್ದು, ಬರೀ 20 ಕೋಟಿ ರೂಪಾಯಿ ಬಜೆಟ್‌ನಲ್ಲಿ. ಆದರೆ ಈ ಸಿನಿಮಾ ಬಿಡುಗಡೆ ಆಗಿ 18 ದಿನದಲ್ಲಿ 257 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 'ಉರಿ ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ 25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಆಗಿತ್ತು. ಆ ಸಿನಿಮಾ ಬಿಡುಗಡೆ ಆಗಿ ಒಟ್ಟು 342 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ 18 ದಿನದಲ್ಲಿ 257 ರೂಪಾಯಿ ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾದ 'ದಿ ಕಾಶ್ಮೀರ್ ಫೈಲ್ಸ್' ಅನ್ನೋ ಹೆಗ್ಗಳಿಕೆ ಪಡೆದಿದೆ. ಇನ್ನು ಈ ಸಿನಿಮಾದ ಕಲೆಕ್ಷನ್ ಕಮಾಯಿ ಮುಂದುವರೆದಿದ್ದು, ಉರಿ ಸಿನಿಮಾದ 242 ಕೋಟಿ ರೂ ಹಣಗಳಿಕೆಯ ರೆಕಾರ್ಡ್‌ನ್ನು ಬ್ರೇಕ್ ಮಾಡೋದು ಪಕ್ಕಾ ಅಂತ ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video