ಸೈಬರ್ ಹ್ಯಾಕರ್ಸ್ ಕೈಯಲ್ಲಿ ಭಾರತದ ಟ್ರೆಂಡಿಂಗ್ ಸಿನಿಮಾ 'The Kashmir Files'

*'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲೋಡ್ ಲಿಂಕ್ ಹೆಸರಲ್ಲಿ ದಾಳಿ
*ಸಾಮಾಜಿಕ ತಾಣಗಳಲ್ಲಿ 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲಿಂಕ್ ವೈರಲ್
*ಡೌನ್ ಲೋಡ್ ಲಿಂಕ್ ಒತ್ತಿದ್ರೆ ಸೈಬರ್ ಹ್ಯಾಕರ್ಸ್ ವೈರಸ್ ದಾಳಿ ಫಿಕ್ಸ್

Share this Video
  • FB
  • Linkdin
  • Whatsapp

ಮಂಗಳೂರು (ಮಾ. 21): ಭಾರತದ ಟ್ರೆಂಡಿಂಗ್ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಮೂಲಕ ಸೈಬರ್ ಹ್ಯಾಕರ್ಸ್ ದಾಳಿ ಆರಂಭಿಸಿದ್ದಾರೆ. ಉಚಿತ ಸಿನಿಮಾ ನೋಡುವ ಆಸೆಗೆ ಬಿದ್ದು ‌ ಡೌನ್ ಲೋಡ್ ಲಿಂಕ್ ಒತ್ತಿದ್ರೆ ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಸೈಬರ್ ಹ್ಯಾಕರ್ಸ್ ವೈರಸ್ ದಾಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಆಂಡ್ರಾಯ್ಡ್ ಫೋನ್ ಮತ್ತು ಲ್ಯಾಪ್ ಟಾಪ್ ಡಾಟಾ ಕದಿಯಲು 'ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಹ್ಯಾಕರ್ಸ್‌ ಬಳುಸುತ್ತಿದ್ದಾರೆ. ನಿಮ್ಮ ಸಾಧನ ವೈರಸ್‌ ದಾಳಿಗೆ ತುತ್ತಾದರೆ ಬ್ಯಾಂಕ್ ಮಾಹಿತಿ ಸೇರಿ ಎಲ್ಲಾ ಖಾಸಗಿ ಡಾಟಾಗಳು ಹ್ಯಾಕರ್ಸ್ ಪಾಲಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿThe Kashmir Files ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಚಿಂತನೆ

ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲೋಡ್ ಲಿಂಕ್ ಹೆಸರಲ್ಲಿ ದಾಳಿ ಮಾಡುವ ಕೆಲಸವನ್ನು ಸೈಬರ್ ಹ್ಯಾಕರ್ಸ್ ಆರಂಭಿಸಿದ್ದು ಪರಿಣಾಮ ಸಾಮಾಜಿಕ ತಾಣಗಳಲ್ಲಿ 'ಕಾಶ್ಮೀರ್ ಫೈಲ್ಸ್' ಫ್ರೀ ಡೌನ್ ಲಿಂಕ್ ವೈರಲ್ ಆಗುತ್ತಿದೆ. ಡೌನ್ ಲೋಡ್ ಲಿಂಕ್ ಒತ್ತಿದ್ರೆ ಸೈಬರ್ ಹ್ಯಾಕರ್ಸ್ ವೈರಸ್ ದಾಳಿ ಫಿಕ್ಸ್ ಎಂದು ಸೈಬರ್ ತಜ್ಞ ಅನಂತ ಪ್ರಭು ಎಚ್ಚರಿಕೆ ನೀಡಿದ್ದಾರೆ. 

Related Video