ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!

ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಇಳಿದಿದ್ದು, ಅವರ ಕೊನೆ ಚಿತ್ರವಾಗಿ ಜನನಾಯಗನ್ ತೆರೆಗೆ ಬರ್ತಾ ಇರೋದು ಗೊತ್ತೇ ಇದೆ. ಸದ್ಯ ಜನನಾಯಗನ್ ರಿಲೀಸ್​ಗೆ ಡೇಟ್ ಕೂಡ ಫಿಕ್ಸ್ ಆಗಿದೆ. ಆದ್ರೆ ಆವತ್ತು ವಿಜಯ್ ಸಿನಿಮಾದೆದ್ರು ಮತ್ತೊಂದು ಬಿಗ್ ಪ್ಯಾನ್ ಇಂಡಿಯಾ ಮೂವಿ ತೆರೆಕಾಣಲಿದೆ. ವಿಜಯ್ ವಿಜಯಯಾತ್ರೆಗೆ ಎನ್.ಟಿ.ಆರ್ -ನೀಲ್ ಜೋಡಿ ತಡೆಯೊಡ್ಡಲಿದೆ. ಸೌತ್ ಸಿನಿ ದುನಿಯಾದಲ್ಲಿ ಒಂದು ಬಿಗ್ಗೆಸ್ಟ್ ಸ್ಟಾರ್ ವಾರ್​ಗೆ ಮುಹೂರ್ತ ಫಿಕ್ಸ್ ಆಗಿದೆ. 

Share this Video
  • FB
  • Linkdin
  • Whatsapp

ದಳಪತಿ ವಿಜಯ್ ನಟನೆಯ ಬಿಗ್ ಬಜೆಟ್ ಪಾಲಿಟಿಕಲ್ ಡ್ರಾಮಾ ಜನನಾಯಗನ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜನವರಿ 9 , 2029ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ತಮಿಳುನಾಡಿನಲ್ಲಿ ಪೊಂಗಲ್​ ಹಬ್ಬಕ್ಕೆ ಥಿಯೇಟರ್​ ಅಂಗಳದಲ್ಲೂ ಹಬ್ಬದ ವಾತಾವರಣ ನಿರ್ಮಿಸಲಿದೆ. ಅಸಲಿಗೆ ಇದು ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನ ನಿರ್ಮಿಸ್ತಾ ಇದ್ದು, ಇದರ ಬಜೆಟ್ ಭರ್ತಿ 300 ಕೋಟಿ. ಎಚ್.ವಿನೋದ್ ಈ ಸಿನಿಮಾ ನಿರ್ದೇಶನ ಮಾಡ್ತಾ ಇದ್ದು, ಹೆಸರಿಗೆ ತಕ್ಕಂತೆ ಇದು ಪಾಲಿಟಿಕಲ್ ಡ್ರಾಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಹೌದು ಈಗಾಗ್ಲೇ ಟಿವಿಕೆ ಅನ್ನೋ ಪಾರ್ಟಿಯನ್ನ ಕಟ್ಟಿ 2026ರ ತಮಿಳುನಾಡು ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿಕ್ಕೆ ವಿಜಯ್ ಸಜ್ಜಾಗಿದ್ದಾರೆ. ವಿಜಯ್ ಖದರ್ ನೋಡಿದರವರು ವಿಜಯ್ ಮುಂದಿನ ತಮಿಳುನಾಡು ಸಿಎಂ ಆದ್ರೂ ಅಚ್ಚರಿಯಿಲ್ಲ ಅಂತಿದ್ದಾರೆ. 

Related Video