ತಾಂಜೇನಿಯಾದಲ್ಲೂ ಕೆಜಿಎಫ್‌ 2 ಹವಾ; ಕಿಲಿ ಪಾಲ್ ಬಾಯಲ್ಲಿ ಕೆಜಿಎಫ್ ಡೈಲಾಗ್.!

ಇಂಡಿಯನ್ ಸಿನಿಮಾಗಳ ಜನಪ್ರಿಯ ಹಾಡುಗಳಿಗೆ ಡಾನ್ಸ್ ಮಾಡಿ ಡೈಲಾಗ್‌ಗಳಿಗೆ ನೃತ್ಯ ಮಾಡಿ ಸೆನ್ಸೇಷನ್ ಆಗಿರೋ ಇದೇ ಕಿಲಿ ಪಾಲ್ ( Kili Paul )ಈಗ ಕೆಜಿಎಫ್-2 ಸಿನಿಮಾದ ವೈಲೆನ್ಸ್ ಡೈಲಾಗ್ ಹೊಡೆದು ಹವಾ ಎಬ್ಬಿಸಿದ್ದಾರೆ. 

First Published Apr 17, 2022, 3:33 PM IST | Last Updated Apr 17, 2022, 6:12 PM IST

ತಾಂಜೇನಿಯಾದ ಕಂಟೆಂಟೆ ಕ್ರಿಯೆಟರ್ ಕಿಲಿ ಪಾಲ್ ಸೋಷಿಯಲ್ ಮೀಡಿಯಾ ಬಳಸೋ ಪ್ರತಿಯೊಬ್ಬರಿಗೂ ಗೊತ್ತಿದೆ. ಯಾಕಂದ್ರೆ ಕಿಲಿ ಪಾಲ್ (Kili Paul) ಮಾಡೋ ವೀಡಿಯೋಗಳನ್ನ ಒಮ್ಮೆಯಾದರೂ ನೋಡಿರ್ತಾರೆ. ಇಂಡಿಯನ್ ಸಿನಿಮಾಗಳ ಜನಪ್ರಿಯ ಹಾಡುಗಳಿಗೆ ಡಾನ್ಸ್ ಮಾಡಿ ಡೈಲಾಗ್‌ಗಳಿಗೆ ನೃತ್ಯ ಮಾಡಿ ಸೆನ್ಸೇಷನ್ ಆಗಿರೋ ಇದೇ ಕಿಲಿ ಪಾಲ್ ಈಗ ಕೆಜಿಎಫ್-2 ಸಿನಿಮಾದ ವೈಲೆನ್ಸ್ ಡೈಲಾಗ್ ಹೊಡೆದು ಹವಾ ಎಬ್ಬಿಸಿದ್ದಾರೆ.

ಶುರುವಾಗುತ್ತಂತೆ 'ಕೆಜಿಎಫ್ ಚಾಪ್ಟರ್ -3', ಹೇಗಿರಲಿದೆ ಸಿನಿಮಾ.?

ಸಾಂಪ್ರದಾಯಿಕ ಮಸಾದ್ ಉಡುಪಿನ ಬದಲು ಸೂಟು ಬೂಟು ಹಾಕಿ ರಾಕಿಯಾಗಿ ಬದಲಾಗಿರೋ ಕಿಲಿ ಪಾಲ್ ಕೆಜಿಎಫ್-2 ಸಿನಿಮಾದ ವೈಲೆನ್ಸ್ ಡೈಲಾಗ್ ಹೊಡೆದು ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Video Top Stories