'ಆಕೆ ನನ್ನ ಅತ್ತಿಗೆ ಅಲ್ಲ..ನನ್ನ ಅಮ್ಮ'..ಪವನ್‌ ಕಲ್ಯಾಣ್‌ ಅಚ್ಚರಿಯ ಗಿಫ್ಟ್ ನೀಡಿದ ಅತ್ತಿಗೆ!

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಬಾರಿ ಗೆದ್ದಾಗಲೇ ಉಪ ಮುಖ್ಯಮಂತ್ರಿ ಸ್ಥಾನವನ್ನೂ ಸಹ ಪಡೆದುಕೊಂಡಿದ್ದಾರೆ. ಪವನ್ ಕಲ್ಯಾಣ್ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕುಟುಂಬದವರಂತೂ ಭಾರಿ ಥ್ರಿಲ್ ಆಗಿದ್ದಾರೆ.

Share this Video
  • FB
  • Linkdin
  • Whatsapp

ಅಣ್ಣ ಮೆಗಾಸ್ಟಾರ್ ಚಿರಂಜೀವಿ ಅಂತೂ ಸಹೋದರನ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದಾರೆ. ಮಗುವಿನಂತೆ ಸಂಭ್ರಮಿಸಿದ್ದಾರೆ. ಇದೀಗ ಪವನ್‌ರ ಅತ್ತಿಗೆ ಅಂದರೆ ಚಿರಂಜೀವಿ ಅವರ ಪತ್ನಿ ಪವನ್ ಕಲ್ಯಾಣ್‌ಗೆ(Pawan Kalyan) ಉಡುಗೊರೆಯೊಂದನ್ನು ನೀಡಿದ್ದಾರೆ. ಅದರ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ(Surekha) ಅವರಿಗೆ ಚಿರು ಸೋದರ ತನ್ನ ಮೈದುನ ಪವನ್ ಮೇಲೆ ವಿಶೇಷ ಪ್ರೀತಿ, ತನ್ನ ಮಗನಂತೆ ಪವನ್‌ರನ್ನು ಕಾಣುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮನೆಗೆ ಬಂದಿದ್ದ ಪವನ್‌ಗೆ ಆರತಿ ಎತ್ತಿ ಸಂಭ್ರಮಿಸಿದ್ದರು ಸುರೇಖಾ, ಇದೀಗ ಪವನ್‌ಗೆ ಅರ್ಥಪೂರ್ಣವಾದ ಉಡುಗೊರೆಯೊಂದನ್ನು ಸುರೇಖಾ ನೀಡಿದ್ದಾರೆ. ಪವನ್ ಕಲ್ಯಾಣ್‌ಗೆ ಸುರೇಖಾ, ಮೌಂಟ್ ಬ್ಲಾಂಕ್ ಪೆನ್(Mount blank pen) ಅನ್ನು ನೀಡಿದ್ದಾರೆ. ಈ ವಿಡಿಯೋವನ್ನು ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅಣ್ಣಾ ಅತ್ತಿಗೆಯಿಂದ ಉಡುಗೊರೆಯಾಗಿ(Gift) ಪಡೆದ ಈ ಪೆನ್ನು ದ ಪೆನ್ನಸಾಮಾನ್ಯವಾಲ್ಲ. ಅತ್ತಿಗೆ ಕೊಟ್ಟಿರುವ ಪೆನ್ನಿನ ಬೆಲೆ ಸುಮಾರು 3 ಲಕ್ಷ ರೂಪಾಯಿಗಳು. ಮೌಂಟ್ ಬ್ಲಾಂಕ್ ಡಿಸ್ನಿ ಕ್ಯಾರೆಕ್ಟರ್ ಎಡಿಷನ್ ಪೆನ್ ಅನ್ನು ಸುರೇಖಾ, ಪವನ್ ಕಲ್ಯಾಣ್ಗೆ ನೀಡಿದ್ದಾರೆ. ಉಡುಗೊರೆ ಸ್ವೀಕರಿಸಿರುವ ಪವನ್ ಕಲ್ಯಾಣ್ ಅತ್ತಿಗೆಗೆ ಧನ್ಯವಾದ ಸಹ ಹೇಳಿದ್ದಾರೆ. ಅಣ್ಣ, ಅತ್ತಿಗೆ ಜೊತೆ ಪವನ್ ಕಲ್ಯಾಣ್ ಹಾಗೂ ಅವರ ಪತ್ನಿ ಒಟ್ಟಿಗೆ ಪೆನ್ನು ಹಿಡಿದು ಫೋಸು ಕೊಟ್ಟಿದ್ದಾರೆ. ಉಡುಗೊರೆಯ ಜೊತೆಗೆ ಸಹ ಅಣ್ಣ ಅತ್ತಿಗೆ ನೀಡಿದ್ದಾರೆ, ‘ತೆಲುಗು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತೀಯ ಎಂಬ ಆಶಯ ಹಾಗೂ ಆಶೀರ್ವಾದ ಇದೆ’ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ದರ್ಶನ್ ಆ ಸಿನಿಮಾ ಶುರುವಾದಾಗಿನಿಂದ ಬರೀ ತೊಂದರೆನೇ? ನಟ ಕೈ ಪೆಟ್ಟು ಮಾಡಿಕೊಂಡಿದ್ದರಿಂದ..ಮರ್ಡರ್‌ವರೆಗೆ!

Related Video