Asianet Suvarna News Asianet Suvarna News

ದರ್ಶನ್ ಆ ಸಿನಿಮಾ ಶುರುವಾದಾಗಿನಿಂದ ಬರೀ ತೊಂದರೆನೇ? ನಟ ಕೈ ಪೆಟ್ಟು ಮಾಡಿಕೊಂಡಿದ್ದರಿಂದ..ಮರ್ಡರ್‌ವರೆಗೆ!

ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ದರ್ಶನ್ ಅಂಡ್ ಗ್ಯಾಂಗ್  ಪೋಲೀಸರ ಅತಿಥಿಗಳಾಗಿದ್ದಾರೆ. ಇತ್ತ ದರ್ಶನ್ ಮೇಲೆ ಕೋಟ್ಯಾಂತರ ರೂಪಾಯಿ ಸುರಿದು ಸಿನಿಮಾ ಮಾಡ್ತಿರೋ ನಿರ್ಮಾಪಕರ ಕಷ್ಟ ಹೇಳತೀರದಾಗಿದೆ.

ಡೆವಿಲ್ ನಿರ್ದೇಶಕ ಕಮ್ ನಿರ್ಮಾಪಕ ಮಿಲನ ಪ್ರಕಾಶ್(Milana Prakash). ಡೆವಿಲ್‌ ಸಿನಿಮಾದ(Devil Movie) ಶೇ.50ಕ್ಕೂ ಹೆಚ್ಚು ಭಾಗ ಶೂಟಿಂಗ್ ಮುಗಿಸಿದ್ದಾರೆ. ಈಗ ದರ್ಶನ್ ಅರೆಸ್ಟ್ ಆಗಿ ಜೈಲಿನಲ್ಲಿದ್ದಾರೆ. ಚಿತ್ರಕ್ಕಾಗಿ ದರ್ಶನ್(Darshan) ಸಂಭಾವನೆಯೇ 22 ಕೋಟಿ ಎನ್ನಲಾಗಿದೆ. ಜೊತೆಗೆ ಸಿನಿಮಾಗೆ ಹಾಕಿರೋ ಬಂಡವಾಳ 40 ಕೋಟಿಗೂ ಹೆಚ್ಚೆನ್ನಲಾಗುತತಿದೆ. ದರ್ಶನ್ ಹೊರ ಬರದೇ ಹೋದಲ್ಲಿ ಸಿನಿಮಾದ ಕತೆ ಏನಾಗಬಹುದು.ನಿರ್ಮಾಪಕನ ಪಾಡೇನು ಅನ್ನೋದು ಒಂದುಕಡೆಯಾದ್ರೆ. ಅದ್ಯಾಕೋ ಡೆವಿಲ್ ಶುರುವಾದಾಗಿನಿಂದ್ಲೂ ದರ್ಶನ್ ಒಂದಲ್ಲಾ ಒಂದು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾರೆ. ದರ್ಶನ್ ಲೈಫ್‌ಗೆ ಈ ಸಿನಿಮಾ ಡೇಂಜರ್ ಡೆವಿಲ್ ಆಗಿಯೇ ಕಾಡಿದೆ. ಡೆವಿಲ್ ಸಿನಿಮಾ ನಿಂತೋಗುತ್ತಿದೆಯಾ ..? ದರ್ಶನ್ ಇಲ್ಲದೆ ಇನ್ನು ಸಿನಿಮಾ ಶೂಟಿಂಗ್ ಹೇಗೆ ಸಾಧ್ಯ ಅದಕ್ಕೆ ಶೂಟಿಂಗ್ ನಿಲ್ಲಿಸಲು ಚಿಂತನೆ ನಡೆಸಿದೆಯಂತೆ ಚಿತ್ರತಂಡ. ನಟ ದರ್ಶನ್‌ಗೆ  "ಡೆವಿಲ್" ತಂದ ಸಂಕಷ್ಟ ಅಷ್ಟಿಷ್ಟಲ್ಲ. ಸಿನಿಮಾ ಅವರಿಗೆ ಬ್ಯಾಡ್ ಟೈಮ್ ತರಲಿಲ್ಲವಾದರೂ ಅದ್ಯಾಕೊ ದರ್ಶನ್ ಈ ಎಲ್ಲ ಬ್ಯಾಡ್ ರೀಸನ್ಸ್ಗೆ ದುರ್ಘಟನೆಗಳಿಗೆ,ಸಮಸ್ಯೆಗಳಿಗೆ ಕಾರಣವಾಗಿದ್ದರು. ಡೆವಿಲ್ ಶುರುವಾದ ಮೇಲೆ ಒಂದಲ್ಲಾ ಒಂದು ಕಾಂಟ್ರವರ್ಸಿಯನ್ನ ದರ್ಶನ್ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರ ಮನಸ್ಸಿಗೆ ಪೆಟ್ಟುಬೀಳಲಿದ್ದು, ಆತ್ಮೀಯರಿಂದ ದೂರಾವಾಗುವ ಸಾಧ್ಯತೆ ಇದೆ..

Video Top Stories