Asianet Suvarna News Asianet Suvarna News

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಜನಿಕಾಂತ್: ಎಷ್ಟೊಂದು ಸರ್ಜರಿ.. ಇಲ್ಲಿದೆ ತಲೈವಾ ಮೆಡಿಕಲ್ ಹಿಸ್ಟರಿ!

ಇತ್ತೀಚಿಗಷ್ಟೇ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ತಲೈವಾ ಆರೋಗ್ಯದಲ್ಲಿ ಚೇತರಿಕೆ ಆಗಿದೆ.  ಆದ್ರೆ ರಜನಿಕಾಂತ್​ಗೆ ಅದೆಷ್ಟು ಆರೋಗ್ಯ ಸಮಸ್ಯೆಗಳಿವೆ..? ಅದೆಷ್ಟು ಸರ್ಜರಿಗೆ ಒಳಗಾಗಿದ್ದಾರೆ ಅನ್ನೋ ವಿಚಾರ ನಿಮಗೆ ಗೊತ್ತಾ..?
 

First Published Oct 5, 2024, 10:16 AM IST | Last Updated Oct 5, 2024, 10:16 AM IST

ಇತ್ತೀಚಿಗಷ್ಟೇ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ತಲೈವಾ ಆರೋಗ್ಯದಲ್ಲಿ ಚೇತರಿಕೆ ಆಗಿದೆ.  ಆದ್ರೆ ರಜನಿಕಾಂತ್​ಗೆ ಅದೆಷ್ಟು ಆರೋಗ್ಯ ಸಮಸ್ಯೆಗಳಿವೆ..? ಅದೆಷ್ಟು ಸರ್ಜರಿಗೆ ಒಳಗಾಗಿದ್ದಾರೆ ಅನ್ನೋ ವಿಚಾರ ನಿಮಗೆ ಗೊತ್ತಾ..? ಸೂಪರ್​ ಸ್ಟಾರ್ ರಜನಿಕಾಂತ್​ರ ಶಾಕಿಂಗ್ ಮೆಡಿಕಲ್ ಹಿಸ್ಟರಿ ಇಲ್ಲಿದೆ ನೋಡಿ. ಕಳೆದ ಸೋಮವಾರ ಸೂಪರ್ ಸ್ಟಾರ್  ರಜನಿಕಾಂತ್ ಸಡನ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದು, ಫ್ಯಾನ್ಸ್​ಗೆ ಅತಂಕ ತಂದಿತ್ತು. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ರಜನಿಕಾಂತ್​ರನ್ನ ಶಿಫ್ಟ್ ಮಾಡಲಾಗಿತ್ತು. 

ಆಸ್ಪತ್ರೆ ಮೂಲಗಳ ಪ್ರಕಾರ ರಜನಿಕಾಂತ್​​ರನ್ನ ಸಣ್ಣದೊಂದು ಸರ್ಜರಿಗೆ ಒಳಪಡಿಸಿದ್ದು ಕಿಬ್ಬೊಟ್ಟೆಯ ಭಾಗಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಹೌದು ಇವತ್ತು ರಜನಿಕಾಂತ್​ಗೆ ಬರೊಬ್ಬರಿ 73ರ ಹರೆಯ. ಈಗಲೂ ತಲೈವಾ ಎನರ್ಜಿಗೆ ಸರಿಸಾಟಿಯೇ ಇಲ್ಲ. ಈಗಲೂ ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವಾರ ರಜನಿ ನಟನೆಯ ವೆಟ್ಟೈಯಾನ್ ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬರ್ತಾ ಇದೆ. ಇನ್ನೂ ಕೂಲಿ, ಜೈಲರ್-2 ಸೇರಿದಂತೆ ರಜನಿಕಾಂತ್ ಅಕೌಂಟ್​​ನಲ್ಲಿ ಸಾಲು ಸಾಲು ಸಿನಿಮಾ ಇವೆ. 

ಈಗಲೂ ಯುವನಟರನ್ನೂ ಮೀರಿಸುವಂತೆ ಮಿಂಚುವ ರಜನಿಯನ್ನ ಕಂಡ್ರೆ ಇವರಿಗೆ ಇಷ್ಟೊಂದು ವಯಸ್ಸು ಅಂತ ನಂಬೋದಕ್ಕೆ ಚಾನ್ಸೇ ಇಲ್ಲ. ಆದ್ರೆ ಹೊರಗೆ ಇಷ್ಟು ಎನರ್ಜಿಟಿಕ್ ಆಗಿ ಕಂಡರೂ ರಜನಿಕಾಂತ್​ಗೆ ಹಲವು ಆರೋಗ್ಯ ಸಮಸ್ಯೆಗಳಿರೋದು ಕೂಡ ನಿಜವೇ. ಹೌದು ರಜನಿಕಾಂತ್ ಇದೂವರೆಗೂ ಹಲವು ಸರ್ಜರಿಗಳಿಗೆ ಒಳಗಾಗಿದ್ದಾರೆ. 2011ರಿಂದಲೂ ತಲೈವಾಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡ್ತಾನೇ ಬಂದಿದೆ. 2011ರಲ್ಲಿ  ಮೂತ್ರಪಿಂಡ ವೈಫಲ್ಯವಾಗಿ ಆಸ್ಪತ್ರೆ ಸೇರಿದ್ದ ರಜನಿಕಾಂತ್ , ಸಿಂಗಾಪುರದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ರು. ಇನ್ನೂ ಶ್ವಾಸಕೋಶ ಸಮಸ್ಯೆಗೂ ರಜನಿಕಾಂತ್​ಗೆ ಸರ್ಜರಿಗೆ ಒಳಪಟ್ಟಿದ್ದಾರೆ. 

2020ರ ಕೋವಿಡ್ ಅವಧಿಯಲ್ಲೂ ರಜನಿಕಾಂತ್​ಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ ಹೊತ್ತಲ್ಲಿ ರಜನಿಕಾಂತ್ ತಮಗಿರುವ ಆರೋಗ್ಯ ಸಮಸ್ಯೆಗಳನ್ನ  ಫ್ಯಾನ್ಸ್ ಮುಂದೆ ಬಹಿರಂಗಪಡಿಸಿದ್ರು. ಒಟ್ಟಾರೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳಿದ್ರೂ ಈಗಲೂ ಯುವನಟನರನ್ನೂ ಮೀರಿಸುವಂತೆ ಌಕ್ಟ್ ಮಾಡೋ ಸೂಪರ್ ಸ್ಟಾರ್ ಗೆ ಒಂದು ಸಲಾಂ ಹೇಳಲೇಬೇಕು. ಸದ್ಯ ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮುಂದಿನ ವಾರ ಬರಲಿರೋ ವೆಟ್ಟೈಯಾನ್ ಪ್ರಮೋಷನ್​ಗೆ ಸಜ್ಜಾಗ್ತಾ ಇದ್ದಾರೆ. ಈ ಆರೋಗ್ಯ ಸಮಸ್ಯೆಗಳೆಲ್ಲಾ ತನಗೆ ಲೆಕ್ಕಾನೇ ಅಲ್ಲ ಅಂತ ಚಾಲೆಂಜ್ ಹಾಕ್ತಾ ಇದ್ದಾರೆ. 

Video Top Stories