Asianet Suvarna News Asianet Suvarna News

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ; ಪುಣ್ಯಭೂಮಿಗೆ ಪತ್ನಿ ಸುಮಲತಾ, ಕುಟುಂಬದವರಿಂದ ಪೂಜೆ

ಸ್ಯಾಂಡಲ್ ವುಡ್‌ನ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್(Ambareesh) ಅವರ ಹುಟ್ಟುಹಬ್ಬ(Birthday) ಇಂದು (ಮೇ 29) ಆಚರಿಸಲಾಗುತ್ತಿದೆ. ರಾಜ್ಯದಾದ್ಯಂತ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ಪ್ರೀತಿಯ ಅಂಬಿಯನ್ನು ನೆನೆಯುತ್ತಿದ್ದಾರೆ. ಇನ್ನು ಅಂಬರೀಶ್ ಕುಟುಂಬದವರು ಸಹ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

 

ಸ್ಯಾಂಡಲ್ ವುಡ್‌ನ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್(Ambareesh) ಅವರ ಹುಟ್ಟುಹಬ್ಬ(Birthday) ಇಂದು (ಮೇ 29) ಆಚರಿಸಲಾಗುತ್ತಿದೆ. ರಾಜ್ಯದಾದ್ಯಂತ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ಪ್ರೀತಿಯ ಅಂಬಿಯನ್ನು ನೆನೆಯುತ್ತಿದ್ದಾರೆ. ಇನ್ನು ಅಂಬರೀಶ್ ಕುಟುಂಬದವರು ಸಹ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂಬಿ ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

 

Video Top Stories