ನಾನು ಸಾಧನವಷ್ಟೇ ನಿಜವಾದ ಸಾಧಕ ಅವರೆಂದ ಬನ್ನಿ: ನಟ ಅಲ್ಲು ಅರ್ಜುನ್ ಹೀಗೆ ಹೇಳಿದ್ದೇಕೆ ?
ರಾಷ್ಟ್ರ ಪ್ರಶಸ್ತಿ ಪಡೆದು ಅಲ್ಲೂ ಅರ್ಜುನ್ ಭಾವುಕ!
ನಾನು ಸಾಧನವಷ್ಟೇ ನಿಜವಾದ ಸಾಧಕ ಅವರು
ರಾಷ್ಟ್ರ ಪ್ರಶಸ್ತಿ ಅವರದ್ದು ನನ್ನದಲ್ಲ ಎಂದ ಬನ್ನಿ
'ದಿ ರೈಸ್' ಯಶಸ್ಸಿನಲ್ಲಿ ತೇಲುತ್ತಿರುವ ತೆಲುಗು ಸ್ಟಾರ್ ಅಲ್ಲು ಅರ್ಜುನ್(Allu Arjun), ಇತ್ತೀಚೆಗಷ್ಟೇ ಈ ಸಿನಿಮಾ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದದ್ದು, ನಿಮಗೆಲ್ಲ ಗೊತ್ತೇ ಇದೆ. ಚಿತ್ರದ ನಿರ್ದೇಶಕ ಸುಕುಮಾರ್(Sukumar) ಅವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸಮಾರಂಭದಲ್ಲಿ ಅಲ್ಲೂ ಅರ್ಜುನ್ ಭಾವುಕರಾಗಿದ್ದಾರೆ. ನಾನೊಬ್ಬ ಸಾಧನವಷ್ಟೇ. ನಿಜವಾದ ಸಾಧಕ ಪುಷ್ಪ ನಿರ್ದೇಶಕ ಸುಕುಮಾರ್ ಎಂದಿದ್ದಾರೆ ಅಲ್ಲೂ ಅರ್ಜುನ್ ಹೇಳಿದ್ದಾರೆ. ದೇವಿಶ್ರೀ ಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅಲ್ಲೂ ಅರ್ಜುನ್ ಒಂದು ದೃಶ್ಯಕ್ಕಾಗಿ ಸುಕುಮಾರ್ ಎಷ್ಟೊಂದು ಕಷ್ಟಪಟ್ಟರು ಮೂರು ಬಾರಿ ಶೂಟಿಂಗ್ ಮಾಡಿದ್ದೂ ಎಲ್ಲವನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕ ಸುಕುಮಾರ್ ನಿಸ್ವಾರ್ಥ ಕೆಲಸಕ್ಕೆ ಮನಸಾರೆ ಮೆಚ್ಚಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಭಾರತದ ಮೋಸ್ಟ್ ಪಾಪ್ಯುಲರ್ ಸ್ಟಾರ್ ಇವರೇನಾ? ಯಶ್,ಪ್ರಭಾಸ್, ವಿಜಯ್,ರಜಿನಿ ಹಿಂದಿಕ್ಕಿದ್ರಾ ಶಾರುಖ್ ಖಾನ್?