
Su From So Movie Release: ವಾರಾಂತ್ಯದಲ್ಲಿ ಬಿಡುಗಡೆಯಾಗಲಿದೆ ಕರಾವಳಿ ಕಾಮಿಡಿ ಥ್ರಿಲ್ಲರ್
ಕರಾವಳಿ ಭಾಷೆಯ ಕಾಮಿಡಿ ಥ್ರಿಲ್ಲರ್ 'ಸು ಫ್ರಂ ಸೋ' ಚಿತ್ರವು ವಾರಾಂತ್ಯದಲ್ಲಿ ತೆರೆಗೆ ಬರಲಿದೆ. ರಾಜ್ ಬಿ ಶೆಟ್ಟಿ ಒಡೆತನದ ಲೈಟರ್ ಬುದ್ಧ ಫಿಲಂಸ್ ನಿರ್ಮಾಣದ ಈ ಚಿತ್ರವು ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಸು ಫ್ರಂ ಸೋ.. ತನ್ನ ವಿಭಿನ್ನ ಟೈಟಲ್ನಿಂದಾನೆ ಎಲ್ಲರ ಗಮನ ಸೆಳೆದಿರೋ ಈ ಸಿನಿಮಾ ವಾರಾಂತ್ಯಕ್ಕೆ ತೆರೆಗೆ ಬರಲಿದೆ. ಕರಾವಳಿ ಫ್ಲೆವರ್ನ ಈ ಕಾಮಿಡಿ ಥ್ರಿಲ್ಲರ್ ಮೂವಿ ಕನ್ನಡದ ಜೊತೆಗೆ ಮಲಯಾಳಂನಲ್ಲೂ ಏಕಕಾಲದಲ್ಲಿ ರಿಲೀಸ್ ಆಗ್ತಾ ಇದೆ.
ಸು ಫ್ರಂ ಸೋ.. ಈ ಟೈಟಲ್ ಕೇಳಿನೇ ಏನಿದು ವಿಭಿನ್ನವಾಗಿದೆಯಲ್ಲಾ ಅಂತ ಜನ ಕುತೂಹಲದಿಂದ ನೋಡಿದ್ರು. ಸು ಫ್ರಂ ಅಂದ್ರೆ ಸುಲೋಚನ ಫ್ರಂ ಸೋಮೇಶ್ವರ ಅನ್ನೋ ಗುಟ್ಟು ಬಿಟ್ಟುಕೊಟ್ಟಿದ್ದ ತಂಡ, ಇದೊಂದು ಕರಾವಳಿ ಫ್ಲೆವರ್ ನ ಕಾಮಿಡಿ ಥ್ರಿಲ್ಲರ್ ಕಹಾನಿ ಅನ್ನೊದನ್ನ ಟ್ರೈಲರ್ ಮೂಲಕ ರಿವೀಲ್ ಮಾಡಿತ್ತು.
ರಾಜ್ ಬಿ ಶೆಟ್ಟಿ ಒಡೆತನದ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಮಾಡಿರೋ ಸಿನಿಮಾ ಇದು. ಜೆ.ಪಿ ತುಮ್ಮಿನಾಡು, ಶನಿಲ್ಗುರು, ದೀಪಕ್ರೈ ಪಣಾಜೆ, ಪ್ರಕಾಶ್ ತುಮ್ಮಿನಾಡು , ಸಂಧ್ಯಾ ಅರೆಕೆರೆ ತಾರಾಗಣದಲ್ಲಿ ಇದ್ದಾರೆ. ರಾಜ್ಬಿ. ಶೆಟ್ಟಿ ಜತೆ ಗರುಡ ಗಮನ ವೃಷಭ ವಾಹನ ಕಥಾ ಸಂಗಮ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಜೆ.ಪಿ ತುಮ್ಮಿನಾಡು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
ಸುಮೇದ್ ಸಂಗೀತ ನಿರ್ದೇಶನದಲ್ಲಿ ಬಂದ ಥ್ಯಾಂಕ್ಸ್ ಅಂಥೆಮ್ ಹಾಡು ಮತ್ತು ಚಿತ್ರದ ಚಿನಕುರಳಿ ಟ್ರೈಲರ್ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆಯಾದ ದುಲ್ಕರ್ ಸಲ್ಮಾನ್ ಒಡೆತನದ wayferar ಫಿಲಂಸ್ ಮಲಯಾಳಂ ವರ್ಷನ್ ನ ಕೇರಳದಲ್ಲಿ ಬಿಡುಗಡೆ ಮಾಡಲಿದೆ.
ಈ ವಾರಾಂತ್ಯಕ್ಕೆ ಸು ಫ್ರಂ ಸೋ ಥಿಯೇಟರ್ ಅಂಗಳಕ್ಕೆ ಬರಲಿದೆ. ನಕ್ಕು ನಗಿಸೋದ್ರ ಜೊತೆಗೆ ಒಂದು ಥ್ರಿಲ್ಲಿಂಗ್ ಅನುಭವವನ್ನೂ ಕೊಡೋ ಉತ್ಸಾಹದಲ್ಲಿದೆ ಈ ಟೀಂ. ಸೋಮೇಶ್ವರದ ಸುಲೋಚನಳ ಕಥೆ ನೋಡಲಿಕ್ಕೆ ನೀವು ಕೂಡ ಸಜ್ಜಾಗಿ.