RSS ಕಥೆಗೆ ರಾಜಮೌಳಿ ಡೈರೆಕ್ಟರ್‌..ಇದು ನಿಜಾನ ? ಮೌಳಿ ಚಿತ್ರದಲ್ಲಿ ದೈವ ಭಕ್ತಿ, ಧರ್ಮ ಪರಿಪಾಲನೆ..!

ಎಸ್.ಎಸ್ ರಾಜಮೌಳಿ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಡೈರೆಕ್ಟರ್. ಬಿಗ್ ಸ್ಟಾರ್‌ಗಳಿಗೆ ಇವ್ರು ಜಕ್ಕಣ್ಣ. ಮೌಳಿ ಡೈರೆಕ್ಷನ್‌ನಲ್ಲಿ ನಟಿಸಬೇಕು ಅನ್ನೋದು ಹಲವ ಕನಸು. ಈ ಕನಸು ಈಗ ರಾಜಕಾರಣಿಗಳಿಗೂ ಬಂದಿದೆ ಅಂದ್ರೆ ನೀವ್ ನಂಬ್ತೀರಾ ? ಯೆಸ್, ನಂಬಲೇ ಬೇಕು. ಯಾಕಂದ್ರೆ ಈಗ ಬಿಜೆಪಿ ಪಕ್ಷ ಸ್ಟಾರ್ ಡೈರೆಕ್ಟರ್ ರಾಜಮೌಳಿ ಹಿಂದೆ ಬಿದ್ದಿದೆ.

First Published Oct 17, 2023, 9:48 AM IST | Last Updated Oct 17, 2023, 9:48 AM IST


ಬಾಹುಬಲಿ ಖ್ಯಾತಿಯ  ಎಸ್‌.ಎಸ್‌.ರಾಜಮೌಳಿ(SS Rajamouli) ಆರ್‌ಎಸ್ಎಸ್ (RSS) ಚರಿತ್ರೆಗೆ ಆಕ್ಷನ್ ಕಟ್ ಹೇಳ್ತಾರಂತೆ. RSS ಚರಿತ್ರೆ ಸಿನಿಮಾಗೆ ಕಥೆ ಕೂಡ ರೆಡಿ ಆಗಿದ್ಯಂತೆ. ಮೌಳಿ ತಂದೆ ವಿಜಯೇಂದ್ರ ಪ್ರಸಾದ್(V Vijayendra Prasad) ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಟೋರಿಯನ್ನ ಸಿದ್ಧಪಡಿಸಿದ್ದಾರಂತೆ. ಸಂಘ ಪರಿವಾರ ತಮ್ಮ ಚರಿತ್ರೆಯನ್ನ ಬೆಳ್ಳಿತೆರೆ ಮೇಲೆ ತೆರೆದಿಡಬೇಕು ಅಂತ ಹಲವು ವರ್ಷಗಳಿಂದ ಪ್ಲಾನ್ ಮಾಡ್ತಿದೆ. ಆರ್‌ಎಸ್ಎಸ್ ಕಥೆಗೆ ಆಕ್ಷನ್ ಕಟ್ ಹೇಳೋಕೆ ಎಸ್.ಎಸ್ ರಾಜಮೌಳಿಯೇ ಸರಿಯಾದ ವ್ಯಕ್ತಿ ಅಂತ ಮೌಳಿಗೆ ಈ ಆಫರ್ ಮಾಡಿದ್ದಾರೆ. ಅದಕ್ಕೆ ಕಾರಣ ರಾಜಮೌಳಿಯ ಸಿನಿಮಾ ಜರ್ನಿ. ರಾಜಮೌಳಿ ಸಿನಿಮಾಗಳನ್ನ ಒಮ್ಮೆ ಮೆಲುಕು ಹಾಕಿ ನೋಡಿ. ಮೌಳಿ ಸಿನಿಮಾದಲ್ಲಿ ಧೈವ ಭಕ್ತಿ ಇರುತ್ತೆ. ಸನಾತನ(Sanatana) ಧರ್ಮದ ಲಿಂಕ್ ಇರುತ್ತೆ. ರಾಮ್‌ ಚರಣ್‌ರ ಮಗಧೀರ, ಪ್ರಭಾಸ್‌ರ ಬಾಹುಬಲಿ, ಇತ್ತೀಚೆಗೆ ಬಂದ ಆರ್‌ಆರ್‌ಆರ್‌ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಹೀಗಾಗಿ ಆರ್‌ಎಸ್ಎಸ್ ತಮ್ಮ ಚರಿತ್ರೆಯನ್ನ ಹೇಳೋಕೆ ರಾಜಮೌಳಿಯೇ ಸರಿಯಾದ ಡೈರೆಕ್ಟರ್ ಅಂತ ಆಯ್ಕೆ ಮಾಡಿದೆಂತೆ. ಇಡೀ ದೇಶ ಲೋಕಸಭೆ ಎಲೆಕ್ಷನ್‌ಗೆ ಸನ್ನದ್ಧವಾಗ್ತಿದೆ. ಇದಕ್ಕಾಗಿ ಬಿಜೆಪಿ ಪಾಳಯಾ ಸಿನಿಮಾದ ಮೊರೆ ಹೋಗಿದೆಯಂತೆ. ಈ ಸಿನಿಮಾ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರ ಇಡೀ ದೇಶದ ಜನರ ಮನೆ-ಮನ ತಲುಪೋಕೆ ಪ್ಲಾನ್ ಮಾಡಿಕೊಂಡಿದ್ದಾರಂತೆ. ರಾಜಮೌಳಿ ಸಂಘಪರಿವಾರದ ಕಥೆಗೆ ಆಕ್ಷನ್ ಕಟ್ ಹೇಳೋದು ಕನ್ಫರ್ಮ್ ಅಂತ ಹೇಳಲಾಗ್ತಿದೆ. 

ಇದನ್ನೂ ವೀಕ್ಷಿಸಿ:  ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !