ಬಿಟೌನ್ ಸ್ಟಾರ್ಸ್ ಮೀರಿಸಿದ ಸೌತ್ ಸ್ಟಾರ್ಸ್; ಹೆಚ್ಚು ಸಂಭಾವನೆ ಪಡೆಯುವ ಹೀರೋ ಇವರೆ

ದಕ್ಷಿಣ ಭಾರತ ಸಿನಿಮಾ ಜಗತ್ತು ಇಂದು ಬಾಲಿವುಡ್ ಮಂದಿಯನ್ನ ಹಿಗ್ಗಾಮುಗ್ಗ ಕಾಡುತ್ತಿದೆ. ಸಿನಿಮಾ ವಿಚಾರದಲ್ಲಿ ಮಾತ್ರವಲ್ಲದೆ ಸಂಭಾವನೆ ವಿಚಾರದಲ್ಲೂ ಕೂಡ ಸೌತ್ ಸ್ಟಾರ್ಸ್ ಬಿ ಟೌನ್ ಮಂದಿಯನ್ನು ಕಾಡುತ್ತಿದೆ.  

Share this Video
  • FB
  • Linkdin
  • Whatsapp


ದಕ್ಷಿಣ ಭಾರತ ಸಿನಿಮಾ ಜಗತ್ತು ಇಂದು ಬಾಲಿವುಡ್ ಮಂದಿಯನ್ನ ಹಿಗ್ಗಾ ಮುಗ್ಗ ಕಾಡುತ್ತಿದೆ. ಇಷ್ಟು ದಿನ ಬಾಲಿವುಡ್ ಸಿನಿಮಾಗಳನ್ನ ಕೊಂಡಾಡಿ ಆ ಚಿತ್ರಗಳ ದೊಡ್ಡ ಸಕ್ಸಸ್ಗೆ ಕಾರಣ ಆಗುತ್ತಿದ್ದ ಉತ್ತರ ಭಾರತದ ಮಂದಿ, ಈಗ ಹಿಂದಿ ಸಿನಿಮಾಗಳನ್ನ ಓರೆಗಣ್ಣಿನಿಂದಲೂ ನೋಡುತ್ತಿಲ್ಲ. ಹೀಗಾಗಿ ಹಿಂದಿಯ ಎಲ್ಲಾ ಸಿನಿಮಾಗಳು ಫ್ಲಾಪ್ ಶೋ ಆಗುತ್ತಿವೆ. ಈ ಪೆಟ್ಟು ಒಂದ್ ಕಡೆ ಆದ್ರೆ ಮತ್ತೊಂದ್ ಕಡೆ ಸ್ಟಾರ್ಗಳ ಸಂಭಾವನೆ ವಿಚಾರದಲ್ಲೂ ಬಾಲಿವುಡ್ನ ಬಿಗ್ ಸ್ಟಾರ್ಸ್ಅನ್ನ ದಕ್ಷಿಣ ಭಾತರದ ಹೀರೋಗಳು ಕಾಡೋಕೆ ಶುರುಮಾಡಿದ್ದಾರೆ. ಬಾಲಿವುಡ್ ಸ್ಟಾರ್ಸ್ಅನ್ನ ಸೌತ್ ಸ್ಟಾರ್ಸ್ ಯಾವ್ ಮಟ್ಟಕ್ಕೆ ಕಾಡುತ್ತಿದ್ದಾರಂದ್ರೆ, ಸಂಭಾವನೆ ವಿಚಾರದಲ್ಲೂ ಈಗ ದಕ್ಷಿಣದ ಹೀರೋಗಳೇ ನಂಬರ್-01 ಪಟ್ಟಕ್ಕೇರಿದ್ದಾರೆ. ಹಿಂದಿಯಲ್ಲಿ ಅತಿ ಹೆಚ್ಚು ರೆಮಂಡ್ರೇಷನ್ ಪಡೆಯೋ ಹೀರೋಗಳಲ್ಲಿ ಸಲ್ಮಾನ್ ಖಾನ್ ಹಾಗು ಅಕ್ಷಯ್ ಕುಮಾರ್ ಇದ್ರು. ಇವ್ರಿಬ್ರು ಒಂದು ಸಿನಿಮಾಗೆ 125 ಕೋಟಿ ಸಂಭಾವನೆ ಪಡೆಯುತ್ತಿದ್ರು. ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ರೆಮಂಡ್ರೇಷನ್ ಪಡೆಯುತ್ತಿರೋ ಹೀರೋ ಯಾರು ಅಂತ ಹುಡುಕಿದ್ರೆ ಸಿಗೋದು ಪುಷ್ಪ ಫೇಮ್ನ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್. ಪುಷ್ಪ ಪಾರ್ಟ್ ಒನ್ ಬಾಕ್ಸಾಫೀಸ್ನಲ್ಲಿ ಗೆದ್ದ ಮೇಲೆ ಅಲ್ಲು ಅರ್ಜುನ್ ಪುಷ್ಪ ಪಾರ್ಟ್2ಗೆ ಬರೋಬ್ಬರಿ 125 ಕೋಟಿ ರೆಮಂಡ್ರೇಷನ್ ಫಿಕ್ಸ್ ಮಾಡಿದ್ದಾರೆ. ನಟ ಪ್ರಭಾಸ್ ಒಂದ್ ಸಿನಿಮಾಗೆ 100 ಕೋಟಿ ಪಡೆದ್ರೆ, ರಾಕಿಂಗ್ ಸ್ಟಾರ್ ಯಶ್ ಪರ್ಸಂಟೇಜ್ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


Related Video