
Salman Khan: ನಿಮ್ಮನ್ನು ಮುಟ್ಟಬಹುದಾ ಎಂದು ವಿಚಿತ್ರ ಬೇಡಿಕೆಯಿಟ್ಟ ನಟಿ ಪ್ರಗ್ಯಾ ಜೈಸ್ವಾಲ್
ಇತ್ತೀಚೆಗೆ ಸೌತ್ ನಟಿ ಪ್ರಗ್ಯಾ ಜೈಸ್ವಾಲ್ ಸಲ್ಮಾನ್ ಅವರನ್ನು ಭೇಟಿ ಮಾಡಿದಾಗ ವಿಚಿತ್ರ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. 'ನಿಮ್ಮನ್ನು ಮುಟ್ಟಬಹುದೇ' ಎಂದು ಪ್ರಗ್ಯಾ ಜೈಸ್ವಾಲ್, ಸಲ್ಲು ಅವರನ್ನು ನೇರವಾಗಿ ಕೇಳಿದ್ದಾರೆ.
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್(Salman Khan) ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದು, ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಲ್ಮಾನ್ ಖಾನ್ ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಇತ್ತೀಚೆಗೆ ಸೌತ್ ನಟಿ ಪ್ರಗ್ಯಾ ಜೈಸ್ವಾಲ್ (Pragya Jaiswal) ಸಲ್ಮಾನ್ ಅವರನ್ನು ಭೇಟಿ ಮಾಡಿದಾಗ ವಿಚಿತ್ರ ಆಸೆಯನ್ನು ವ್ಯಕ್ತಪಡಿಸಿದ್ದಾರೆ. 'ನಿಮ್ಮನ್ನು ಮುಟ್ಟಬಹುದೇ' ಎಂದು ಪ್ರಗ್ಯಾ ಜೈಸ್ವಾಲ್ ನೇರವಾಗಿ ಕೇಳಿದ್ದಾರೆ. ಹೌದು! 'ಮೇ ಚಲಾ' ಮ್ಯೂಸಿಕ್ ವಿಡಿಯೋದಲ್ಲಿ ಪ್ರಗ್ಯಾ ಜೈಸ್ವಾಲ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಿದ್ದಾರೆ.
Kangana Ranaut: ಸೌತ್ ಸೂಪರ್ ಸ್ಟಾರ್ಸ್‌ಗೆ ಬಾಲಿವುಡ್‌ನಿಂದ ದೂರವಿರಿ ಎಂದಿದ್ದೇಕೆ ಬಾಲಿವುಡ್ ಕ್ವೀನ್?
ಮೊದಲ ದಿನದ ಶೂಟಿಂಗ್ ಅನುಭವದ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 'ಅದೊಂದು ರೊಮ್ಯಾಂಟಿಕ್ ಸಾಂಗ್. ಅದರಲ್ಲಿ ನಟಿಸುವಾಗ ಇಬ್ಬರ ನಡುವೆ ಕೆಮಿಸ್ಟ್ರಿ ಚೆನ್ನಾಗಿ ಇರಬೇಕಿತ್ತು. ಅದಕ್ಕಾಗಿ ಸಲ್ಮಾನ್ ಖಾನ್ ಅವರು ಒಳ್ಳೆಯ ಮೂಡ್ನಲ್ಲಿ ಇರುವಂತೆ ನೋಡಿಕೊಳ್ಳಬೇಕಿತ್ತು. ಈಕೆ ಅತಿಯಾಗಿ ಆಡ್ತಾ ಇದ್ದಾಳೆ ಎಂಬ ಮಾತು ಅವರಿಂದ ಬಾರದಂತೆ ಎಚ್ಚರಿಕೆ ವಹಿಸಬೇಕಿತ್ತು. ಹಾಗಾಗಿ 'ನಿಮ್ಮನ್ನು ಮುಟ್ಟಬಹುದೇ' ಎಂದು ಅನುಮತಿ ಕೇಳಿದೆ. ಇದಕ್ಕೆ ಸಲ್ಮಾನ್ ಖಂಡಿತವಾಗಿಯೂ ಮುಟ್ಟಬಹುದು ಎಂದು ಒಪ್ಪಿಗೆ ನೀಡಿದ್ದಾಗಿ ಪ್ರಗ್ಯಾ ಜೈಸ್ವಾಲ್ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment