Kangana Ranaut: ಸೌತ್ ಸೂಪರ್ ಸ್ಟಾರ್ಸ್‌ಗೆ ಬಾಲಿವುಡ್‌ನಿಂದ ದೂರವಿರಿ ಎಂದಿದ್ದೇಕೆ ಬಾಲಿವುಡ್ ಕ್ವೀನ್?
ಬಾಲಿವುಡ್ ನಟಿ ಕಂಗನಾ ರಣಾವತ್ ಆಗಾಗ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಾರೆ. ಇದೀಗ ದಕ್ಷಿಣ ಭಾರತದ ನಟರಾದ ಯಶ್ ಮತ್ತುಅಲ್ಲು ಅರ್ಜುನ್‌ರನ್ನು ಕಂಗನಾ ಹಾಡಿ ಹೊಗಳಿದ್ದಾರೆ. ಅವರಿಬ್ಬರ 'ಕೆಜಿಎಫ್' ಮತ್ತು 'ಪುಷ್ಪ' ಚಿತ್ರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಆಗಾಗ ತಮ್ಮ ಹೇಳಿಕೆಯಿಂದ ಸುದ್ದಿಯಾಗುತ್ತಾರೆ. ಇದೀಗ ದಕ್ಷಿಣ ಭಾರತದ ನಟರಾದ ಯಶ್ (Yash) ಮತ್ತು ಅಲ್ಲು ಅರ್ಜುನ್‌ರನ್ನು (Allu Arjun) ಕಂಗನಾ ಹಾಡಿ ಹೊಗಳಿದ್ದಾರೆ. ಅವರಿಬ್ಬರ 'ಕೆಜಿಎಫ್' (KGF) ಮತ್ತು 'ಪುಷ್ಪ' (Pushpa) ಚಿತ್ರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ (Instagram Story) ಶೇರ್ ಮಾಡಿಕೊಂಡಿರುವ ನಟಿ, ದಕ್ಷಿಣ ಚಲನಚಿತ್ರಗಳ ಯಶಸ್ಸು ಮತ್ತು ರಾಷ್ಟ್ರದಾದ್ಯಂತ ಅಲ್ಲಿನ ನಟರ ಜನಪ್ರಿಯತೆ ಹೆಚ್ಚಾಗಲು ಮೂರು ಕಾರಣವನ್ನು ತಿಳಿಸಿದ್ದಾರೆ.
ಸೀರೆ ನೋಡೋಕೆ ಇಷ್ಟು ಸಿಂಪಲ್ ಆದರೆ Rashmika Mandanna ಮಾತ್ರ 31 ಸಾವಿರ ಕೊಟ್ಟಿದ್ದಾರೆ!
'ದಕ್ಷಿಣದ ಚಿತ್ರಗಳು ಮತ್ತು ಸೂಪರ್‌ಸ್ಟಾರ್‌ಗಳು ಈ ಮಟ್ಟ ತಲುಪಲು ಕಾರಣಗಳೆಂದರೆ 'ಅವರು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ, ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ ಮತ್ತು ಸಂಬಂಧಗಳು ಸಾಂಪ್ರದಾಯಿಕವಾಗಿವೆ ಹೊರತು ಪಾಶ್ಚಿಮಾತ್ಯವಲ್ಲ, ಅವರ ವೃತ್ತಿಪರತೆ ಮತ್ತು ಉತ್ಸಾಹ ಸಾಟಿಯಿಲ್ಲದವು' ಎಂದು ಕಂಗನಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್‌ನಿಂದ ಈ ಪರಂಪರೆಯನ್ನು ಹಾಳಾಗಲು ಬಿಡಬೇಡಿ. ಬಾಲಿವುಡ್‌ನಿಂದ ಭ್ರಷ್ಟರಾಗಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment