ಹನಿಮೂನ್‌ನಿಂದ ಬಂದ ಕಿಯಾರ-ಸಿದ್ಧಾರ್ಥ್: ಕಿಯಾರ ನೋಡಿ ಫ್ಯಾನ್ಸ್ ಬೇಜಾರಾಗಿದ್ದು ಯಾಕೆ?
ಇತ್ತೀಚೇಗಷ್ಟೇ ಮದುವೆಯಾದ ಸಿದ್-ಕಿಯಾರ ಹನಿಮೂನ್‌ನಿಂದ ವಾಪಾಸಾಗಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ.
ಇತ್ತೀಚೇಗಷ್ಟೇ ಮದುವೆಯಾದ ಬಿಟೌನ್ ನವ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹನಿಮೂನ್‌ನಿಂದ ಹಿಂತಿರುಗಿದ್ದಾರೆ. ಇತ್ತೀಚೆಗೆ ಶೇರ್ಷಾ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಕಿಯಾರಾ ನೋಡಿದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆಯ ನಂತರವೂ ಕಿಯಾರಾ ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡ ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ. ಇನ್ನು ಕಿಯಾರಾ ಗೋಲ್ಡನ್ ಸ್ಲಿಂಗ್ ಬ್ಯಾಗ್ ಹಿಡಿದುಕೊಂಡು ಬಿಳಿ ಪ್ಯಾಂಟ್ ಧರಿಸಿ ಸಿದ್ಧಾರ್ಥ ಕೈ ಹಿಡಿದು ವಿಮಾನ ನಿಲ್ದಾಣದಿಂದ ಹೊರ ಬರುವಾಗ ಫುಲ್ ಜೋಷ್‌ನಲ್ಲಿದ್ದರು. ಪಾಪಾಜಿಗಳ ಕ್ಯಾಮಾರಾದ ಕಣ್ಣುಗಳಲ್ಲಿ ಕಿಯಾರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಹಣೆಯಲ್ಲಿ ಸಿಂಧೂರ, ಕೊರಳಲ್ಲಿ ತಾಳಿ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment