Shilpa Shetty: ಬಾಲಿವುಡ್ ನಟಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ ಗೊತ್ತಾ?

ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ 'ಇಂಡಿಯಾಸ್​ ಗಾಟ್​ ಟ್ಯಾಲೆಂಟ್​' ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಶೋ ಸೆಟ್​ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. 

First Published Mar 5, 2022, 3:03 PM IST | Last Updated Mar 5, 2022, 3:03 PM IST

ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಸಿನಿಮಾ, ಕಿರುತೆರೆ, ಯೋಗ ತರಬೇತಿ, ಉದ್ಯಮ, ಜಾಹೀರಾತು ಹೀಗೆ ಹಲವು ಕ್ಷೇತ್ರದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ 'ಇಂಡಿಯಾಸ್​ ಗಾಟ್​ ಟ್ಯಾಲೆಂಟ್​' ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಶೋ ಸೆಟ್​ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ (Rohit Shetty) ಅವರಿಗೆ ಶಿಲ್ಪಾ ಶೆಟ್ಟಿ ಅವರು ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ/ಗಾಯಕ ಬಾದ್​ಷಾ ಅವರಿಗೂ ಕೂಡ ಏಟು ಬಿದ್ದಿದೆ. 

Gangubai Kathiawadi ಚಿತ್ರದಲ್ಲಿ ನಟಿಸೋಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಸದ್ಯ ಈ ವಿಡಿಯೋ ವೈರಲ್​ (Viral) ಆಗಿದ್ದು, ಶೂಟಿಂಗ್​ ಬಿಡುವಿನ ವೇಳೆ ಜಡ್ಜ್​ ಸೀಟ್​ನಲ್ಲಿ ಕುಳಿತಿದ್ದ ರೋಹಿತ್​ ಶೆಟ್ಟಿ ಮತ್ತು ಬಾದ್​ಷಾ ಅವರು ಗಾಢವಾಗಿ ಏನನ್ನೋ ಚರ್ಚೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ಬಂದ ಶಿಲ್ಪಾ ಶೆಟ್ಟಿ ಅವರು ರೋಹಿತ್​ ಶೆಟ್ಟಿಯ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಕಡೆಗೆ ರೋಹಿತ್​ ಶೆಟ್ಟಿ ಗಮನ ಕೊಡಲಿಲ್ಲ. ಅದರಿಂದ ಶಿಲ್ಪಾ ಶೆಟ್ಟಿಗೆ ಕೋಪ ಬಂತು. ಪಕ್ಕದಲ್ಲಿ ಇದ್ದ ಗಾಜಿನ ಬಾಟಲ್​ ಎತ್ತಿಕೊಂಡು ರೋಹಿತ್​ ಶೆಟ್ಟಿಗೆ ಹೊಡೆದಿದ್ದು, ಈ ವಿಡಿಯೋ ತಮಾಷೆಗಾಗಿ ಮಾಡಲಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies