Asianet Suvarna News Asianet Suvarna News

ಐಶ್ವರ್ಯಾ ಸರ್ಜಾ ಮದುವೆಯಲ್ಲಿ ಧ್ರುವ ಮಸ್ತ್ ಡಾನ್ಸ್..! ಇಲ್ಲಿದೆ ವಿಡಿಯೋ

ಐಶ್ವರ್ಯಾ ಸರ್ಜಾ ಮದುವೆಯಲ್ಲಿ ಧ್ರುವ ಸರ್ಜಾ ಮಸ್ತ್ ಡಾನ್ಸ್
ಮದುವೆ ಪಾರ್ಟಿಯಲ್ಲಿ ಸರ್ಜಾ ಕುಟುಂಬ ಡಾನ್ಸ್ ಧಮಾಕ !
ಉಮಾಪತಿ ರಾಮಯ್ಯರನ್ನ ಮದುವೆ ಆದ ಆಶ್ವರ್ಯ ಸರ್ಜಾ

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತನ್ನ ಮೊದಲ ಪುತ್ರಿ ಐಶ್ವರ್ಯಾ ಸರ್ಜಾಗೆ(Aishwarya Sarja) ಜೂನ್ 10ರಂದು ಮದುವೆ ಮಾಡಿದ್ರು. ತಮಿಳು ಚಿತ್ರರಂಗದ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ (Umapati Ramaiah) ಅವರೊಂದಿಗೆ ಐಶ್ವರ್ಯ ಸರ್ಜಾ ದಾಂಪತ್ಯ(Marriage) ಶುರು ಮಾಡಿದ್ದಾರೆ. ಜೂನ್ 10ರಂದು ಐಶ್ವರ್ಯ ಸರ್ಜಾ ಉಮಾಪತಿ ರಾಮಯ್ಯ ಕಲ್ಯಾಣೋತ್ಸವ ನಡೆದಿದೆ. ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರೇ ಹನುಮಾನ್ ದೇಗುಲ ಕಟ್ಟಿಸಿದ್ದರು. ಈ ದೇಗುಲದಲ್ಲಿಯೇ ಕಳೆದ ಅಕ್ಟೋಬರ್ 27 ರಂದು ಐಶ್ವರ್ಯಾ ಸರ್ಜಾ, ಉಮಾಪತಿ ನಿಶ್ಚಿತಾರ್ಥ ನಡೆದಿತ್ತು. ಈಗ ಇಲ್ಲಿಯೇ ಮದುವೆ ಕೂಡ ನಡೆದಿದೆ. ಈ ಮದುವೆಯ ರಿಸೆಪ್ಷನ್‌ನಲ್ಲಿ(wedding reception) ನಟ ಧ್ರುವ ಸರ್ಜಾ(Dhruva sarja) ಹಾಗು ಅರ್ಜುನ್ ಸರ್ಜಾ ದಂಪತಿ, ಐಶ್ವರ್ಯಾ ಸರ್ಜಾ ಉಮಾಪತಿ ರಾಮಯ್ಯ ಸೇರಿದಂತೆ ಸರ್ಜಾ ಕುಟುಂಬ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಐಶ್ವರ್ಯಾ ಸರ್ಜಾ ಉಮಾಪತಿ ರಾಮಯ್ಯರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪ್ರೀತಿಸುತ್ತಿದ್ದ ಈ ಜೋಡಿ ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ಮದುವೆ ಆರತಕ್ಷತೆ, ವೆಡ್ಡಿಂಗ್ ಪಾರ್ಟಿ ಬಹಳ ಅದ್ದೂರಿಯಾಗಿ ಮಾಡಲಾಗಿದೆ. ಆ ವಿಡಿಯೋಗಳು ಈಗ ಒಂದೊಂದೇ ಹೊರ ಬರುತ್ತಿವೆ.

ಇದನ್ನೂ ವೀಕ್ಷಿಸಿ:  'ಮ್ಯಾಕ್ಸ್' ಟೀಂ ಕೊಡ್ತಿರೋ ಬಿಗ್ ಅಪ್‌ಡೇಟ್ ಏನು..? ಸಿನಿಮಾ ರಿಲೀಸ್ ಡೇಟ್ ಸುಳಿವು ಕೊಟ್ಟ ಕಿಚ್ಚ..!

Video Top Stories