ಸತತ 38 ವರ್ಷ, ಶಿವಣ್ಣ ಬಣ್ಣ ಹಚ್ಚದ ದಿನವೇ ಇಲ್ಲ! ಸಿನಿಕಾರ್ಮಿಕರ ಅನ್ನದಾತ, ದೊರೆಗಾಗಿ ಕಾದಿದೆ ಚಿತ್ರಲೋಕ!

ಕನ್ನಡ ಸಿನಿಪ್ರಿಯರ ನೆಚ್ಚಿನ ತಾರೆ. ದೊಡ್ಮನೆ ದೊಡ್ಮಗ ಡಾ.ಶಿವರಾಜ್​ಕುಮಾರ್ ತಮ್ಮ ಬೆನ್ನು ಬಿದ್ದಿರೋ ಕ್ಯಾನ್ಸರ್ ಮಾರಿ ಜೊತೆ ಹೋರಾಟಕ್ಕಿಳಿದಿದ್ದಾರೆ.   ಅಮೇರಿಕದಲ್ಲಿ ಶಿವಣ್ಣನಿಗೆ ಟ್ರೀಟ್​ಮೆಂಟ್ ನೀಡಲಾಗ್ತಿರೋ ಹಾಸ್ಪಿಟಲ್ ಎಂಥದ್ದು ಅಂದ್ರೆ ಅದು ವಿಶ್ವದಲ್ಲೇ ನಂ.1 ಕ್ಯಾನ್ಸರ್ ಹಾಸ್ಪಿಟಲ್. 

First Published Dec 23, 2024, 4:35 PM IST | Last Updated Dec 23, 2024, 4:35 PM IST

ಬೆಂಗಳೂರು: ಚಿಕಿತ್ಸೆಗಾಗಿ ಅಮೇರಿಕಕ್ಕೆ ತೆರಳಿರೋ ಶಿವರಾಜ್​ಕುಮಾರ್ ಮಿಯಾಮಿ ಕ್ಯಾನ್ಸರ್ ಇನ್​ಸ್ಟೀಟ್ಯೂಟ್​​ಗೆ ದಾಖಲಾಗಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಶಿವಣ್ಣನಿಗೆ ಸರ್ಜರಿ ನಡೆಯಲಿದೆ. ಮುಂದಿನ ಒಂದೂವರೇ ತಿಂಗಳು ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ ಶಿವಣ್ಣ.

ಅಸಲಿಗೆ ಶಿವಣ್ಣ ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿವರೆಗೂ ಇಷ್ಟು ಸುಧೀರ್ಘವಾಗಿ ರಜೆ ತೆಗೆದುಕೊಂಡಿರೋದು ಇದೇ ಮೊದಲು. 38 ವರ್ಷಗಳಿಂದಲೂ ಶಿವಣ್ಣನ ದಿನ ಆರಂಭವಾಗ್ತಾ ಇದ್ದಿದ್ದೇ ಮೇಕಪ್ ಹಚ್ಚುವ ಮೂಲಕ.