Asianet Suvarna News Asianet Suvarna News

ಶಾರುಖ್‌ ಖಾನ್‌ V/S ಪ್ರಭಾಸ್ ಸಮರದಲ್ಲಿ ಗೆದ್ದಿದ್ದು ಯಾರು ? ಸಲಾರ್ ಫಸ್ಟ್ ಡೇ ಕಲೆಕ್ಷನ್ ಸುಮಾರು 200 ಕೋಟಿ..!

ಶಾರುಖ್‌ ಖಾನ್ ಅಭಿನಯದ ಡಂಕಿ ಮತ್ತು ಪ್ರಭಾಸ್ ಅಭಿನಯದ ಸಲಾರ್ ಕೇವಲ ಒಂದು ದಿನದ ಗ್ಯಾಪ್‌ನಲ್ಲಿ ರಿಲೀಸ್  ಆಗಿದ್ದ ಸಿನಿಮಾಗಳು. ಶಾರುಖ್‌ ಖಾನ್ ಬಾಲಿವುಡ್ ಸೂಪರ್ ಸ್ಟಾರ್. ಪ್ರಭಾಸ್ ಟಾಲಿವುಡ್ ಸೂಪರ್ ಸ್ಟಾರ್. ಆದರೆ ಈ ಬಾರಿಯೂ ಶಾರುಖ್‌ ಖಾನ್ ಎದುರು ಪ್ರಭಾಸ್ ಗೆದ್ದಿದ್ದಾರೆ. ಹೊಂಬಾಳೆ ಫಿಲಮ್ಸ್ ಕ್ಲಿಯರ್ ವಿನ್ನರ್ ಆಗಿದೆ.

ಅಧಿಕೃತ ದಾಖಲೆಗಳ ಪ್ರಕಾರವೇ ಸಲಾರ್ ಫಸ್ಟ್ ಡೇ ಕಲೆಕ್ಷನ್ 178.7 ಕೋಟಿ ಕಲೆಕ್ಷನ್ ಮಾಡಿದೆ. 2023ರಲ್ಲಿ ಮೊದಲ ದಿನವೇ ಅತೀ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಸಿನಿಮಾ ಅನ್ನೋ ಖ್ಯಾತಿ ಈಗ ಸಲಾರ್ಗೆ(Salaar) ಸಿಕ್ಕಿದೆ. ಶಾರುಖ್ ಖಾನ್ ಅವರ 'ಪಠಾಣ್', 'ಜವಾನ್' ಸಿನಿಮಾ ಕಲೆಕ್ಷನ್‌ನ್ನು 'ಸಲಾರ್' ಬೀಟ್ ಮಾಡಿದೆ. 'ಜವಾನ್' ಸಿನಿಮಾವು 75 ಕೋಟಿ ರೂಪಾಯಿ, 'ಪಠಾಣ್' ಸಿನಿಮಾವು ಮೊದಲ ದಿನ 57 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಡಂಕಿ(Dunki) ಕೇವಲ 30 ಕೋಟಿ ಕಲೆಕ್ಷನ್ ಮಾಡಿತ್ತು. ಅಷ್ಟೇ ಏಕೆ ಅನಿಮಲ್ ಚಿತ್ರದ ಫಸ್ಟ್ ಕಲೆಕ್ಷನ್ನೂ ಸೇರಿಸಿ ಲೆಕ್ಕ ಹಾಕಿದ್ರೂ ಸಲಾರ್ ಫಸ್ಟ್ ಡೇ ಕಲೆಕ್ಷನ್‌ಗೆ ಹತ್ತಿರ ಬರ್ತಾ ಇಲ್ಲ. ಡಂಕಿ ಸಿನಿಮಾ ಮೂರು ದಿನದ ಕಲೆಕ್ಷನ್ ಇನ್ನೂ 150 ಕೋಟಿ ದಾಟಿಲ್ಲ. ಆದರೆ ಸಲಾರ್ ಫಸ್ಟ್ ಡೇ ಕಲೆಕ್ಷನ್(Collection) ಸರಿ ಸುಮಾರು 200 ಕೋಟಿಯ ಹತ್ತಿರ ಇದೆ. ಎರಡನೇ ದಿನವೂ ಸಲಾರ್ ಭರ್ಜರಿ ಬಿಸಿನೆಸ್ ಮಾಡುತ್ತಿದ್ದರೆ, ಡಂಕಿಯ ಕಲೆಕ್ಷನ್ ಡಲ್ಲಾಗಿಯೇ ಇದೆ. ಡಂಕಿ ಬಾಕ್ಸಾಫೀಸಿನಲ್ಲಿ ತಿಣುಕುತ್ತಿದ್ದರೆ, ಸಲಾರ್ ಮಾತ್ರ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಪ್ರಶಾಂತ್ ನೀಲ್(Prashanth Neel) ಸೃಷ್ಟಿಸಿದ ಕಾನ್ಸಾರ್ ಸಾಮ್ರಾಜ್ಯ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಉಗ್ರಂ, ಕೆಜಿಎಫ್‌ಗಿಂತ ಇದು ಬೇರೆಯದೇ ಫೀಲ್ ಕೊಡ್ತಿದೆ ಅನ್ನೋದು ಸಿನಿಮಾ ನೋಡಿದವರ ಒಪೀನಿಯನ್. ಪ್ರೊಡಕ್ಷನ್ ಹೌಸ್ ಹೊಂಬಾಳೆ ಕನ್ನಡದ್ದು. ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡಿಗ. ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡಾ ಕನ್ನಡದವರೇ. ಅಷ್ಟೇ ಅಲ್ಲ, ಡೈನಮಿಕ್ ಸ್ಟಾರ್ ದೇವರಾಜ್, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ನಟ ಪ್ರಮೋದ್, ಗುಳ್ಟು ಮತ್ತು ಕ್ಷೇತ್ರಪತಿ ಖ್ಯಾತಿಯ ನವೀನ್ ಶಂಕರ್, ಭಜರಂಗಿ ಲೋಕಿ, ಮಧು ಗುರುಸ್ವಾಮಿ, ರವಿ ಭಟ್ ಮೊದಲಾದ ಕನ್ನಡ ಕಲಾವಿದರ ದಂಡೇ ಚಿತ್ರದಲ್ಲಿದೆ.

ಇದನ್ನೂ ವೀಕ್ಷಿಸಿ:  ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!