ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ‘ಕಾಟೇರ’
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆರಾಧನಾ
ಇದೇ 29ಕ್ಕೆ ರಾಜ್ಯಾದ್ಯಂತ ಕಾಟೇರ ‘ದರ್ಶನ’

First Published Dec 25, 2023, 10:57 AM IST | Last Updated Dec 25, 2023, 10:57 AM IST

ಕಾಟೇರ ಚಿತ್ರದ ರೈತ ಗೀತೆ ರಿಲೀಸ್(raitha song) ಆಗಿದೆ. ಅದೂ ರೈತ ಚಳವಳಿಗಳ ಕ್ರಾಂತಿ ಭೂಮಿ ಮಂಡ್ಯದಲ್ಲಿ. ನಟ ದರ್ಶನ್(Darshan Thoogudeepa) ಈ ಬಾರಿ ಅನ್ನದಾತರ ಗೀತೆ ಮೊಳಗಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮಂಡ್ಯವನ್ನೇ(Mandya) ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಮಂಡ್ಯ ಜಿಲ್ಲೆ ಪ್ರೊ.ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ ಮೊದಲಾದವರ ಹುಟ್ಟೂರು. ಇವತ್ತಿಗೂ ರೈತ ಚಳವಳಿ ಜೀವಂತವಗಿರೋದು ಮಂಡ್ಯದಲ್ಲಿ. ಅಂತಹ ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ರಿಲೀಸ್ ಮಾಡೋ ಮೂಲಕ ದಾಖಲೆ ಬರೆಯೋಕೆ ಹೊರಟಿದೆ ಕಾಟೇರ. ಅಲ್ಲದೆ ಮಂಡ್ಯ ಅಂಬರೀಷ್ ಅವರ ತವರೂ ಹೌದು. ಅಂಬರೀಷ್ ನೆನಪಿನೊಂದಿಗೇ ಆರಂಭವಾದ ಕಾರ್ಯಕ್ರಮದ ಹೈಲೈಟ್ ಮಂಡ್ಯದ ಗಂಡು. ಅಂಬಿಯ ನೆನಪಿನೊಂದಿಗೇ ಶುರುವಾಯ್ತು ಕಾಟೇರ ಕಾರ್ಯಕ್ರಮ. ಅದು ಮುಗಿಯುತ್ತಿದ್ದಂತೆಯೇ ಪುಟ್ಟ ಮಕ್ಕಳ ಯೋಗ ನೆರೆದಿದ್ದವರೆಲ್ಲರ ಮನರಂಜಿಸ್ತು. ಇದು ರೈತ ಮಕ್ಕಳು ನಡೆಸಿದ ಯೋಗ ಕಾರ್ಯಕ್ರಮ. ಅದು ಮುಗಿದ ಕೂಡಲೇ ಬಿಡುಗಡೆಯಾಗಿದ್ದು ರೈತರ ಗೀತೆ. ಬೆವರ ಹನಿಲಿ ಬೆಳೆದ ಬಂಡೆಗಲ್ಲು ಇವನು ನಡೆವ ದಾರಿ ಮೈಲಿಗಲ್ಲು ಇವನ ಎದುರು ಯಾರು ಹೋಗಬ್ಯಾಡಿ ಹಿಂದೆಐತೆ ಸೈನ್ಯವೂ ಈ ರೈತ ಗೀತೆ ಬರೆದಿರೋದು ಪುನೀತ್ ಆರ್ಯ. ಇದರಲ್ಲಿ ಹೈಲೈಟ್ ಆಗಿರೋದು ರೈತ. ರೈತನ ಸ್ವಾಭಿಮಾನ. ರೈತನ ಸಂಕಟ. ರೈತನ ಅಭಿಮಾನ. ಇದು ಕಾಟೇರ ಥೀಮ್ ಸಾಂಗ್ . ಕಾಟೇರ ರೈತ ಗೀತೆಯನ್ನು ಬಿಡುಗಡೆ ಮಾಡಿದ ಮೇಲೆ ದರ್ಶನ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಹೇಳಿಕೊಂಡವರು ಸಂಸದೆಯೂ ಆಗಿರುವ ಸುಮಲತಾ. ಕಾಟೇರ ಚಿತ್ರಕ್ಕೆ ಪ್ರೊಡ್ಯೂಸರ್ ರಾಕ್ ಲೈನ್ ವೆಂಕಟೇಶ್. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ. ಹರಿಕೃಷ್ಣ ಅವರಿಗೆ ಇದು ದರ್ಶನ್ ಜೊತೆ 29ನೇ ಸಿನಿಮಾ ಅನ್ನೋದೇ ಹೈಲೈಟ್.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!