ಸಲಾರ್ ಸಾಮ್ರಾಜ್ಯದ ಸುಲ್ತಾನ ಪ್ರಭಾಸ್..! 2ನೇ ಟ್ರೇಲರ್ ಔಟ್..ಪ್ರೇಕ್ಷಕ ಶಾಕ್..!
ಬಹುನಿರೀಕ್ಷಿತ ಸೌತ್ ಇಂಡಿಯಾದ ಸೂಪರ್ ಹಿಟ್, ಮಾಸ್ ಸಿನಿಮಾ ಸಲಾರ್ ಡಿಸೆಂಬರ್ 22ಕ್ಕೆ ರಿಲೀಸ್ ಆಗ್ತಿದೆ. ಟಾಲಿವುಡ್‌ನ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ‘ಕೆಜಿಎಫ್’ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಸಲಾರ್’ ರಿಲೀಸ್‌ಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಸದ್ಯ 2ನೇ ಟ್ರೇಲರ್ ನೋಡಿ ಪ್ರೇಕ್ಷಕ ಶಾಕ್ ಆಗಿದ್ದಾನೆ.
‘ಸಲಾರ್’ ಸಿನಿಮಾದಲ್ಲಿ ಇಬ್ಬರು ಸ್ನೇಹಿತರ ಕಥೆ ಇದೆ. ಅದರ ಝಲಕ್ ತೋರಿಸುವ ರೀತಿಯಲ್ಲಿ 2ನೇ ಟ್ರೇಲರ್ ಮೂಡಿಬಂದಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಅದರ ಅಬ್ಬರ ಕೂಡ ಟ್ರೇಲರ್‌ನಲ್ಲಿ(Trailer) ಕಾಣಿಸಿದೆ. ಮಾಸ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರು ‘ಸಲಾರ್’(Salaar movie) ಬಿಡುಗಡೆಗಾಗಿ ಕಾದಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲ ಭಾಷೆಯಲ್ಲೂ ಟ್ರೇಲರ್ ರಿಲೀಸ್ ಆಗಿದೆ. ಇನ್ನು ಈಗಾಗಲೇ ಸಲಾರ್ ಸಿನಿಮಾದ ಫಸ್ಟ್ ಟ್ರೇಲರ್ ಹೊಂಬಾಳೆ ಫಿಲ್ಮಂ(Hombale films) ರಿಲೀಸ್ ಮಾಡಿತ್ತು.. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ‘ಸಲಾರ್’ ಟ್ರೈಲರ್ ಸಖತ್ ಮಾಸ್ ಆಗಿತ್ತು. ಆದ್ರೀಗ 2ನೇ ಟೀಸರ್‌ನಲ್ಲಿ ಪವರ್‌ಫುಲ್ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಪ್ರಭಾಸ್(Prabhas) ಅವರ 120 ಅಡಿಯಿರುವ ಬೃಹತ್ ಕಟೌಟ್ ಇದೀಗ ಎಲ್ಲರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಹವಾ ಕ್ರಿಯೇಟ್ ಆಗಿದೆ. ಅಷ್ಟಕ್ಕೂ ಇದು ಯಾವ ರಾಜ್ಯದಲ್ಲಿ ಗೊತ್ತಾ? ತೆಲುಗು ರಾಜ್ಯದಲ್ಲಿ ಅಲ್ಲ! ಬದಲಿಗೆ ಬಾಲಿವುಡ್‌ನ ಮಹಾನಗರಿ ಮುಂಬೈ ನಗರದಲ್ಲಿ. ಮುಂಬೈನ ಥಾಣೆಯ ಆರ್-ಮಾಲ್ ಮುಂಭಾಗದಲ್ಲಿ ಈ ಕಟೌಟ್ ಇರಿಸಲಾಗಿದ್ದು, ಅದರ ಮುನ್ನೋಟದ ವಿಡಿಯೋ ಸದ್ಯ ಪ್ರಭಾಸ್ ಫ್ಯಾನ್ಸ್ಗಳ ಪ್ರೀತಿಗೆ ಪಾತ್ರವಾಗಿದೆ.
ಇದನ್ನೂ ವೀಕ್ಷಿಸಿ: Today Horoscope: ವೃಶ್ಚಿಕ ರಾಶಿಯವರ ಬುದ್ಧಿಮಂದವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..