Pushpa Song: ಸಾಮಿ ಸಾಮಿ ಹಾಡಿಗೆ ಟ್ಯೂನ್ ಹಾಕಿದ ವಾದ್ಯದವರು

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರದ ಸಾಮಿ ಸಾಮಿ ಹಾಡಿಗೆ ಕೇರಳದ ದೇವಸ್ಥಾನದಲ್ಲಿ, ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ಟ್ಯೂನ್​ ನುಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪ' (Pushpa) ಚಿತ್ರವು ಬಿಡುಗಡೆಯಾಗಿ ಈಗಾಗಲೇ ಯಶಸ್ಸು ಗಳಿಸಿದ್ದು, ಇತ್ತೀಚೆಗೆ ಒಟಿಟಿ ಫ್ಲಾಟ್‌ಫಾರ್ಮ್‌ ಅಮೇಜಾನ್ ಪ್ರೈಮ್‌ನಲ್ಲಿಯೂ 'ಪುಷ್ಪ' ಚಿತ್ರ ಬಿಡುಗಡೆಯಾಗಿದೆ. ವಿಶೇಷವಾಗಿ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral) ಆಗಿದ್ದು, ಎಲ್ಲೆಲ್ಲೂ 'ಪುಷ್ಪ' ಚಿತ್ರದ ಹಾಡುಗಳೇ ಕೇಳಿಬರುತ್ತಿವೆ, ಇದೀಗ ದೇವಸ್ಥಾನದ ಪೂಜೆ ಸಮಯದಲ್ಲೂ 'ಸಾಮಿ ಸಾಮಿ' (Sami Sami Song) ಹಾಡು ಕೇಳಿಸುತ್ತಿದೆ! ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋವೊಂದು ಸಖತ್ ವೈರಲ್ ಆಗಿದೆ. 

Add Asianetnews Kannada as a Preferred SourcegooglePreferred

Pushpa Movie: ಅಲ್ಲು ಅರ್ಜುನ್ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು?

ಹೌದು! ದೇವಸ್ಥಾನದ ಉತ್ಸವಗಳಲ್ಲಿ ಹಲವಾರು ಬಗೆಯ ವಾದ್ಯಗಳನ್ನು ನುಡಿಸುವುದು ವಾಡಿಕೆ. ಆದರೆ ಕೇರಳದ ದೇವಸ್ಥಾನದಲ್ಲಿ, ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು 'ಸಾಮಿ ಸಾಮಿ' ಹಾಡಿನ ಟ್ಯೂನ್​ ನುಡಿಸಿದ್ದಾರೆ. ಆ ವಿಡಿಯೋವನ್ನು ನೆಟ್ಟಿಗರು ಸೋಶಿಯಲ್​ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದು, ವೈರಲ್ ಆಗಿದೆ. ಇನ್ನು 'ಪುಷ್ಪ' ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಅವರು ಸಂಗೀತ ಸಂಯೋಜನೆ ಮಾಡಿದ್ದು, 'ಊ ಅಂಟಾವಾ ಮಾವ' ಹಾಡು ಕೇಳುಗರಿಗೆ ಐಟಂ ಸಾಂಗ್​ ಆಗಿರಬಹುದು. ಆದರೆ ನನ್ನ ಪಾಲಿಗೆ ಈ ಹಾಡುಗಳೆಲ್ಲವೂ ಭಕ್ತಿಗೀತೆಗೆ ಸಮ ಎಂದು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video