ಬಾಲಿವುಡ್ ಬ್ಯೂಟಿ ಜೊತೆ ಶ್ರೀವಲ್ಲಿ ಪೈಪೋಟಿ: ಮಿರ್ಚಿ ಮಲೈಕಾ ಅರೋರಾ.. ಮಸಾಲ ರಶ್ಮಿಕಾ ಮಂದಣ್ಣ

ಮಿರ್ಚಿ ಮಲೈಕಾ.. ಮಸಾಲ ರಶ್ಮಿಕಾ.. ಪಡ್ಡೆ ಹೈಕಳೆದ್ರು ಶೃಂಗಾರ ಲೋಕ..!,, ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತ..ನಶೆಯೋ ನಶೆ ಪಾಯ್ಸನ್ ಬೇಬಿ..!,, ಒಂದೇ ಫ್ರೇಮಲ್ಲಿ ಡಬಲ್ ಬಿಜಲಿ.. ಥಾಮಾ ಸಾಂಗ್ ಎಬ್ಬಿಸಿದ ಬಿರುಗಾಳಿ.

Share this Video
  • FB
  • Linkdin
  • Whatsapp

ಮಿರ್ಚಿ ಮಲೈಕಾ.. ಮಸಾಲ ರಶ್ಮಿಕಾ.. ಪಡ್ಡೆ ಹೈಕಳೆದ್ರು ಶೃಂಗಾರ ಲೋಕ..!,, ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತ..ನಶೆಯೋ ನಶೆ ಪಾಯ್ಸನ್ ಬೇಬಿ..!,, ಒಂದೇ ಫ್ರೇಮಲ್ಲಿ ಡಬಲ್ ಬಿಜಲಿ.. ಥಾಮಾ ಸಾಂಗ್ ಎಬ್ಬಿಸಿದ ಬಿರುಗಾಳಿ..! ಇದೇ ಈ ಹೊತ್ತಿನ ವಿಶೇಷ,, ರಶ್ಮಿಕಾ-ಮಲೈಕಾ ಸೌಂದರ್ಯ ಸಮರ. ಕಿರಿಕ್ ಬ್ಯೂಟಿ ರಶ್ಮಿಕಾ ನಟನೆಯ ಹಾರರ್ ಕಾಮಿಡಿ ಸಿನಿಮಾ ಥಾಮಾ ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಪಾರ್ಟಿ ಸಾಂಗ್ ಪಾಯ್ಸನ್ ಬೇಬಿ ರಿಲೀಸ್ ಆಗಿದ್ದು ಅಕ್ಷರಶಃ ಬಿರುಗಾಳಿ ಎಬ್ಬಿಸಿದೆ. ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತವಿರುವ ಈ ಹಾಡು ಅದೆಷ್ಟು ಮಾದಕವಾಗಿದೆ ಅಂದ್ರೆ ಪಡ್ಡೆ ಹುಡುಗರು ನಶೆಯಲ್ಲಿ ತೇಲ್ತಾ ಇದ್ದಾರೆ. ರಶ್ಮಿಕಾ-ಮಲೈಕಾರ ಈ ಸೌಂದರ್ಯ ಸಮರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಬಿಟೌನ್​ ಜಗತ್ತು ಐಟಂ ಡಾನ್ಸರ್ಸ್​​ಗಳ ಹಬ್.. ಬಾಲಿವುಡ್​​ ಮನೆ ಯಂಗಳಕ್ಕೆ ಬರೋ ಪ್ರತಿ ನಟಿಯರೂ ಹಾಟ್ ಅವತಾರ ಎತ್ತಿ ಅಂದ ಚಂದವನ್ನೆಲ್ಲಾ ತೆರೆದಿಡ್ತಾರೆ. ಈಗ ರಶ್ಮಿಕಾ ಸರಧಿ. ಬಾಲಿವುಡ್​​ ಜಗತ್ತಿಗೆ ಹಾಟ್​ ಕಿಕ್​ ಕೊಡೋ ಬೇರೆ ನಟಿಯರ ಜೊತೆ ರಶ್ಮಿಕಾ ಈಗ ಪೈಪೋಟಿಗೆ ಬಿದ್ದಿದ್ದಾರೆ.

Related Video