Asianet Suvarna News Asianet Suvarna News

ಅದ್ದೂರಿ ಬಾಲಿವುಡ್‌ನಲ್ಲೇ ವಿಭಿನ್ನ ಈ ನಟನ ಮದುವೆ: ಮಣಿಪುರಿ ಶೈಲಿಯಲ್ಲಿ ವಿವಾಹವಾದ ರಣದೀಪ್ ಹೂಡ

ಬಾಲಿವುಡ್ನ ಖ್ಯಾತ ನಟ ರಣದೀಪ್ ಹೂಡಾ ಮತ್ತು ನಟಿ ಲಿನ್ ಲೈಶ್ರಾಮ್ ಅವರು ಇಂಫಾಲ್ನಲ್ಲಿ ಬುಧವಾರ ನಡೆದ ಸಾಂಪ್ರದಾಯಿಕ ಮೈತಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಣಿಪುರದ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿದೆ.
 

ಬಾಲಿವುಡ್ನ ಖ್ಯಾತ ನಟ ರಣದೀಪ್ ಹೂಡಾ ಮತ್ತು ನಟಿ ಲಿನ್ ಲೈಶ್ರಾಮ್ ಅವರು ಇಂಫಾಲ್ನಲ್ಲಿ ಬುಧವಾರ ನಡೆದ ಸಾಂಪ್ರದಾಯಿಕ ಮೈತಿ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಣಿಪುರದ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿದೆ. ರಣದೀಪ್ ಹೂಡಾ ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡ್ರೆ, ಲಿನ್ ಲೈಶ್ರಾಮ್ ಅವರು ಟ್ರೆಡಿಷನ್ ಲುಕ್ನಲ್ಲಿ ಮಿಂಚಿದರು. ತಮ್ಮ ಮದುವೆ ಫೋಟೋಗಳನ್ನು ನಟ ರಣದೀಪ್ ಹೂಡಾ ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗಳು  ಫುಲ್ ವೈರಲ್ ಆಗಿವೆ. ಎಂದಿನಂತೆ ಬಾಲಿವುಡ್ ವಿವಾಹವಲ್ಲದೆ  ಹೋಗಿದ್ದೆ ಅದಕ್ಕೆ ಕಾರಣ ಎನ್ನಲಾಗಿದೆ. 

ರಣದೀಪ್ ಪರಿಪೂರ್ಣ ಮಣಿಪುರಿ ವರನಾಗಿ ಬದಲಾದರೆ, ಲಿನ್ ಸಾಂಪ್ರದಾಯಿಕ ಮಣಿಪುರಿ ವಧುವಿನಂತೆ ಧರಿಸಿದ್ದರು. ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ದಂಪತಿಗಳು ಹಾರ ಬದಲಾಯಿಸಿಕೊಂಡರು. ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್  ತಮ್ಮ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅನ್ಯೋನ್ಯವಾಗಿ ವಿವಾಹವಅಗಿದ್ದಾರೆ.  ಮೈತಿ ಸಂಪ್ರದಾಯದಂತೆ ವಿವಾಹವಾಗಿದ್ದು ವಿಶೇಷ. ಅವರ ಅಧಿಕೃತ ವಿವಾಹ ಹೇಳಿಕೆಯಲ್ಲಿ, “ಅರ್ಜುನನು ಮಣಿಪುರಿ ಯೋಧ ರಾಜಕುಮಾರಿ ಚಿತ್ರಾಂಗದಾ ಅವರನ್ನು ವಿವಾಹವಾದ ಮಹಾಭಾರತದ ಎಲೆಯನ್ನು ತೆಗೆದುಕೊಂಡು, ನಮ್ಮ ಕುಟುಂಬಗಳು ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ನಾವು ಮದುವೆಯಾಗುತ್ತಿದ್ದೇವೆ. 

ನಮ್ಮ ಮದುವೆಯು 2023 ರ ನವೆಂಬರ್ 29 ರಂದು ಇಂಫಾಲ್, ಮಣಿಪುರದಲ್ಲಿ ನಡೆಯಲಿದೆ ಎಂದು ಹಂಚಿಕೊಳ್ಳಲು ನಾವು ಅಪಾರ ಸಂತೋಷದಿಂದ ತುಂಬಿದ್ದೇವೆ, ನಂತರ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ. ನಾವು ಈ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಈ ಸಂಸ್ಕೃತಿಗಳ ಒಕ್ಕೂಟಕ್ಕಾಗಿ ನಾವು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆ, ಇದಕ್ಕಾಗಿ ನಾವು ಶಾಶ್ವತವಾಗಿ ಋಣಿಯಾಗಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ. ಪ್ರೀತಿ ಮತ್ತು ಬೆಳಕಿನಲ್ಲಿ, ನಿಮ್ಮ ಲಿನ್ ಮತ್ತು ರಂದೀಪ್ ಎಂದಿದ್ದಾರೆ. ರಣ್ದೀಪ್ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಜನಾಂಗೀಯ ನಿಂದನೆಯ ಕಮೆಂಟ್ಗಳು ಹರಿದುಬಂದಿದ್ದು. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರವರ ಸಂಪ್ರದಾಯವನ್ನು ಗೌರವಿಸುವ ಗುಣ ಪ್ರತಿಯೊಬ್ಬರಿಗೂ ಬರಬೇಕೆಂದು ಅಭಿಪ್ರಾಯಗಳು ವ್ಯಕ್ತವಾಗಿವೆ.